ಪೊಲೀಸ್​ ಇಲಾಖೆಗೆ ಹೊಸ ವಾಹನಗಳ ಹಸ್ತಾಂತರ

Koppal Police Vehicle Minister innaguration SP
Published on

ಕೊಪ್ಪಳ: ಕೆ.ಕೆ.ಆರ್​.ಡಿ.ಬಿ ಹಾಗೂ ಕೊಪ್ಪಳ ಶಾಸಕರ ಅನುದಾನದಲ್ಲಿ ಜಿಲ್ಲಾ ಪೊಲೀಸ್​ ಇಲಾಖೆಗೆ ಮಂಜೂರಾದ 21 ಹೊಸ ವಾಹನಗಳನ್ನು ನಗರದ ಎಸ್ಪಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಂಗಳವಾರ ಇಲಾಖೆಗೆ ಹಸ್ತಾಂತರಿಸಿ ಸೇವೆಗೆ ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲಾ ಪೊಲೀಸ್​ ಇಲಾಖೆಗೆ 2024-&25ನೇ ಸಾಲಿನಲ್ಲಿ 200 ಲಕ್ಷ ರೂ. ಅನುದಾನದಲ್ಲಿ ದೈನಂದಿನ ಕರ್ತವ್ಯಕ್ಕಾಗಿ 16 ಬೊಲೆರೋ, ಎರಡು ಸ್ಕಾರ್ಪಿಯೋ ಮತ್ತು ಒಂದು ಇನ್ನೋವಾ ಕ್ರಿಸ್ಟಾ ವಾಹನಗಳನ್ನು ಹಾಗೂ ಕೊಪ್ಪಳ ಶಾಸಕರ ಅನುದಾನದಡಿ 20 ಲಕ್ಷ ರೂ. ಅನುದಾನದಲ್ಲಿ ಎರಡು ಬೋಲೆರೊ ಖರೀದಿಸಲಾದ ವಾಹನಗಳು ಸೇವೆ ಆರಂಭಿಸಿದವು.

ಶಾಸಕ ರಾವೇಂದ್ರ ಹಿಟ್ನಾಳ, ಡಿಸಿ ನಲಿನ್​ ಅತುಲ್​, ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ, ಎಸಿ ಕ್ಯಾ.ಮಹೇಶ್​ ಮಾಲಗಿತ್ತಿ, ಎಎಸ್ಪಿ ಆರ್​.ಹೇಮಂತಕುಮಾರ, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ತಹಸೀಲ್ದಾರ್​ ವಿಠ್ಠಲ್​ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net