ನುಲಿಯ ಚಂದಯ್ಯ ಕಾಯಕ ಯೋಗಿ

ನುಲಿಯ ಚಂದಯ್ಯ ಕಾಯಕ ಯೋಗಿ
Published on

ಕೊಪ್ಪಳ: ಕಾಯಕ, ದಾಸೋಹ ಮೂಲಕ ಸಮಾಜಕ್ಕೆ ಬೆಳಕು ನೀಡಿದ ಶರಣ ನುಲಿಯ ಚಂದಯ್ಯ ಎಂದು ಕಾರಟಗಿ ಶಿಕ್ಷಕ ಜಗದೀಶ್​ ಭಜಂತ್ರಿ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಗೆ ಹಲವು ಶಿವಶರಣರು ಶ್ರಮಿಸಿದ್ದಾರೆ. ಇದೊಂದು ಸುವರ್ಣಯುಗ. ಜಗಜ್ಯೋತಿ ಬಸವೇಶ್ವರರು ಹಾಗೂ ಅನೇಕ ಮಹನಿಯರು ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸಲು ಹೋರಾಡಿದರು. ಅನುಭವ ಮಂಟಪದ ಶ್ರೇಷ್ಠ ಶರಣರಲ್ಲಿ ನುಲಿಯ ಚಂದಯ್ಯ ಒಬ್ಬರು. ನೂಲು ತಯಾರಿಸುವ ಕಾಯಕದ ಮೂಲಕ ದಾಸೋಹ ಮಾಡಿಕೊಂಡು ಬಂದವರು. ಕಾಯಕದಲ್ಲಿ ಕೈಲಾಸಕಂಡ ಮಹಾನ ಶರಣರು. 48 ವಚನ ರಚಿಸಿದ್ದು, ಅವು 4 ಸಾವಿರ ವಚನಕ್ಕೆ ಸಮಾನ ಎಂದರು.

ಸಮುದಾಯ ಮುಖಂಡ ಲಕ್ಷ$್ಮಣ ಮಾಳಗಿ ಮಾತನಾಡಿ, ನುಲಿಯ ಚಂದಯ್ಯ ವಚನಗಳ ಮೂಲಕ ಕಲ್ಯಾಣ ಕ್ರಾಂತಿಗೆ ಶ್ರಮಿಸಿದ್ದಾರೆ. ಇಂತಹ ಶರಣರ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಇದು ಮೂರನೇ ವರ್ಷದ ಕಾರ್ಯಕ್ರಮ. ಕೊರಮ ಸಮಾಜದವರು ಉದ್ಯೋಗಕ್ಕಾಗಿ ಉರೂರಿಗೆ ಹೋಗುತ್ತಾರೆ. ಆದ್ದರಿಂದ ನಮ್ಮ ಸಮಾಜವು ಪರಿಶಿಷ್ಟ ಜಾತಿಯ ಅಲೇಮಾರಿ ಜನಾಂಗಕ್ಕೆ ಒಳಪಡುತ್ತದೆ ಎಂದರು.

ನಗರದ ಗವಿಸಿದ್ದೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ಕಂಬಣ್ಣ ಭಜಂತ್ರಿ, ಬಸವರಾಜ ಭಜಂತ್ರಿ, ಲಕ್ಷ$್ಮಣ ಭಜಂತ್ರಿ, ನಾಗರಾಜ ಭಜಂತ್ರಿ, ಭೀಮಣ್ಣ ಭಜಂತ್ರಿ, ಪರಶುರಾಮ ಭಜಂತ್ರಿ, ತಿಪ್ಪಣ್ಣ ಭಜಂತ್ರಿ, ಶಿವಕುಮಾರ ಗೊಂಡಬಾಳ, ವಿಜಯಕುಮಾರ ಹಾಲಳ್ಳಿ, ಯಮನೂರಪ್ಪ ಭಜಂತ್ರಿ, ಭೀಮಣ್ಣ ಕಾಮನೂರ, ತಿಪ್ಪಣ್ಣ, ಯಮನೂರಪ್ಪ ಕೊಪ್ಪಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net