

ಕೊಪ್ಪಳ: ನರೇಗಾ ಯೋಜನೆಯಡಿ ಸಾಮುದಾಯಿಕ ಹಾಗೂ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ತಾಪಂ ನರೇಗಾ ಐಇಸಿ ಸಂಯೋಜಕ ದೇವರಾಜ ಪತ್ತಾರ ತಿಳಿಸಿದರು.
ತಾಲೂಕಿನ ಚುಕ್ಕನಕಲ್ ಗ್ರಾಮದಲ್ಲಿ ನರೇಗಾ ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಗ್ರಾಮೀಣ ರೈತರು, ಕೂಲಿಕಾರರು, ಮಹಿಳೆಯರ ಸಬಲತೆಗಾಗಿ ಯೋಜನೆ ಜಾರಿ ಮಾಡಲಾಗಿದೆ. ವರ್ಷದಲ್ಲಿ 100 ದಿನ ಕೆಲಸ ನಿರ್ವಹಿಸಬಹುದಾಗಿದೆ. ಮುಂದಿನ ವರ್ಷದ ಕ್ರಿಯಾ ಯೋಜನೆ ತಯಾರಿಕೆಗೆ ಮನೆ ಮನೆ ಭೇಟಿ ನೀಡಿ ಬೇಡಿಕೆ ಪಡೆಯಲಾಗುತ್ತಿದೆ. ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆ ಮೂಲಕ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಆದ್ಯತೆ ಮೇರೆಗೆ ಕಾಮಗಾರಿ ಬೇಡಿಕೆ ಸಲ್ಲಿಸಿ ಪಡೆಯಿರಿ ಎಂದರು.
ಬಹದ್ದೂರಬಂಡಿ ಗ್ರಾಪಂ ಅಧ್ಯಕ್ಷ ಯಲ್ಲಪ್ಪ ತಳವಾರ ಮಾತನಾಡಿ, ಗ್ರಾಪಂ ಹಾಗೂ ಅನುಷ್ಠಾನ ಇಲಾಖೆ ಕಾಮಗಾರಿಗಳ ಬೇಡಿಕೆ ಪಡೆದು ವಾರ್ಡ್, ಗ್ರಾಮ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಮುಂದಿನ ವರ್ಷದ ಸಮಗ್ರ ಕ್ರಿಯಾಯೋಜನೆ ತಯಾರಿಸಿ ಜಿಪಂಗೆ ಸಲ್ಲಿಸಲಾಗುವುದೆಂದರು.
ಗ್ರಾಮಸ್ಥರಿಂದ 14 ವೈಯಕ್ತಿಕ ಕಾಮಗಾರಿ, 1 ಕೆರೆ ಹೂಳೆತ್ತುವ ಕಾಮಗಾರಿಗೆ ಬೇಡಿಕೆ ಪಡೆಯಲಾಯಿತು. ಗ್ರಾಪಂ ಸಿಬ್ಬಂದಿ ಚಂದ್ರಪ್ಪ ರಾಠೋಡ, ವಿದ್ಯಾಶ್ರೀ ಮಾರುತಿ ಹರಿಜನ, ಕಮಲಮ್ಮ ಸೋಮಪ್ಪ ವಾಲಿಕಾರ, ಗ್ರಾಮ ಕಾಯಕ ಮಿತ್ರ ಭಾಗ್ಯಶ್ರೀ ಹಾದಿಮನಿ, ಕಾಯಕ ಬಂಧು ಮರಿಯಪ್ಪ, ಅನಿತಾ, ಮಂಗಳಾ, ಫಕೀರಪ್ಪ, ಲಕ್ಷ$್ಮವ್ವ, ದೇವೇಂದ್ರಪ್ಪ, ವಿಜಯ ಇತರರಿದ್ದರು.