ನೇತಾಜಿ ಸುಭಾಷ್‌ಚಂದ್ರ ಬೋಸ್ ಧೈರ್ಯ, ಸಾಹಸ ಅವಿಸ್ಮರಣೀಯ

Koppal Netaji Birthday
ಕೊಪ್ಪಳದಲ್ಲಿ ಶನಿವಾರ ನೇತಾಜಿ ಸುಭಾಷ್‌ಚಂದ್ರ ಬೋಸ್‌ರ 124ನೇ ಜಯಂತಿ ಆಚರಿಸಲಾಯಿತು.
Published on

ಕೊಪ್ಪಳ: ನೇತಾಜಿಯವರ ಧೈರ್ಯ, ಸಾಹಸ, ಆದರ್ಶ ಎಂದಿಗೂ ಅವಿಸ್ಮರಣೀಯ ಎಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ನಾಗರಾಜ ಮೇಕಾ ಹೇಳಿದರು.

ನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್124ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೇತಾಜಿ ದೇಶದ ಸ್ವಾತಂತ್ರೃಕ್ಕಾಗಿ ಐಎನ್‌ಎ ಸೈನ್ಯ ಕಟ್ಟಿದರು. ಅವರ ಧೈರ್ಯ, ಸಾಮರ್ಥ್ಯ, ಎದೆಗಾರಿಕೆ ನಮ್ಮ ವಿದ್ಯಾರ್ಥಿಗಳು, ಯುವಕರಿಗೆ ಆದರ್ಶಪ್ರಾಯ. ಪ್ರತಿಯೊಬ್ಬರೂ ಅವರ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಕರಾದ ಹೇಮಣ್ಣ ಕವಲೂರ, ಪರಶುರಾಮ ಸಾಲ್ಮನಿ, ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಮಾತನಾಡಿದರು. ವಿದ್ಯಾರ್ಥಿಗಳಾದ ಸುದೀಪ, ಭಾಗ್ಯಲಕ್ಷ್ಮೀ, ಶೋಯೆಬ್ ನೇತಾಜಿ ಕುರಿತು ಭಾಷಣ ಮಾಡಿದರು. ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ರೇಣುಕಾ ಅತ್ತನೂರ, ಶಿಕ್ಷಕಿಯರಾದ ಗೌಸಿಯಾ ಬೇಗಂ, ಶಿಲ್ಪಾಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net