

ಕೊಪ್ಪಳ: ನಗರದ ಶ್ರೀ ಚೈತನ್ಯ ಸಂಸ್ಥೆಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಐದು ಜನ ಬಾಲಕಿಯರ ಒಳಗೊಂಡ ಕಲಬುರಗಿ ಮಹಿಳಾ ನೆಟ್ ಬಾಲ್ ತಂಡ ದಸರಾ ರಾಜ್ಯಮಟ್ಟದ ಸಿಎಂ ಕಪ್ ನೆಟ್ಬಾಲ್ ಪಂದ್ಯದಲ್ಲಿ ಮೊದಲ ಬಾರಿ ತೃತೀಯ ಸ್ಥಾನ (ಕಂಚು) ಪಡೆದಿದೆ.
ಮೊದಲ ಬಾರಿಗೆ ಇಂತಹ ಸಾಧನೆ ಮಾಡಿದ ತಂಡದ ಸಾರಥ್ಯವನ್ನು ಸಾಹಿತ್ಯ ಎಂ. ಗೊಂಡಬಾಳ ವಹಿಸಿದ್ದರು. ಅಮರೇಶ ಕೋಚ್ ಆಗಿದ್ದರೆ ನೆಟ್ಬಾಲ್ ಸಂಸ್ಥೆ ಕಾರ್ಯಾಧ್ಯಕ್ಷ ಮಂಜುನಾಥ ಗೊಂಡಬಾಳ ಮ್ಯಾನೇಜರ್ ಆಗಿ ತಂಡ ಮುನ್ನಡೆಸಿದರು. ಕೊಪ್ಪಳದ ಸಾಹಿತ್ಯ ಗೊಂಡಬಾಳ, ಗ್ರೀಷ್ಮಾ ಜಿ. ಎಂ., ಅಕ್ಷಯಾ ಜಿ., ಬಿಬಿ ಬತುರ್ ಅಫ್ಶೀನ್, ಶ್ರೀಯಾ ಎಸ್. ಕರ್ಣಂ, ಹೊಸಪೇಟೆ ಜಿಲ್ಲೆಯ ಸೃಷ್ಟಿ ಬಿ.ಜಿ., ಫ್ಲೇವಿ ಜಿ., ಮನ್ವಿತಾ ಮಸ್ತಿ, ಅನಘ ಎಂ., ಬಿ. ಲಕ್ಷಿ$್ಮ, ತಾನ್ವಿ ವಿ.ಎಚ್., ಕಾಮಿನೇನಿ ಕಾರುಣ್ಯ ತಂಡದಲ್ಲಿ ಭಾಗವಹಿಸಿದ್ದರು.