ನಾಮಫಲಕ ಧ್ವಂಸಗೊಳಿಸಿದವರ ಪತ್ತೆಗೆ ಆಗ್ರಹ

30102020 Koppal Nameplate Appeal
Published on

ಕೊಪ್ಪಳ: ಕೊಪ್ಪಳದ ಹೊಸಪೇಟೆ-ಗಂಗಾವತಿ ರಸ್ತೆಯ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ನಾಮಫಲಕ ಕಟ್ಟಡವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಮೂಲಕ ಜಿಲ್ಲಾಧಿಕಾರಿಗೆ ಡಾ.ಬಾಬು ಜಗಜೀವನರಾಮ್ ಯುವಕ ಮಂಡಳಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಕಳೆದ 30 ವರ್ಷದ ಹಿಂದೆ ಸರ್ಕಾರಿ ಆಸ್ಪತ್ರೆ ಮುಂದೆ ಜಗಜೀವನ್‌ರಾಮ್ ವೃತ್ತ ನಿರ್ಮಾಣ ಮಾಡಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಕಿಡಿಗೇಡಿಗಳು ವೃತ್ತವನ್ನು ಉದ್ದೇಶಪೂರ್ವಕವಾಗಿ ಮತ್ತು ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರದಿಂದ ಕಟ್ಟಡ ಹಾಗೂ ಗ್ರಿಲ್‌ಅನ್ನು ಕಿತ್ತಿದ್ದಾರೆ. ಹೀಗಾಗಿ ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ಗವಿಸಿದ್ದಪ್ಪ ಗಿಣಿಗೇರಿ, ಗಾಳೆಪ್ಪ ಪೂಜಾರ್, ಚನ್ನಬಸಪ್ಪ ಹೊಳೆಯಪ್ಪನವರ್, ಮಲ್ಲಿಕಾರ್ಜುನ ಪೂಜಾರ್, ಹನುಮೇಶ ಕಡೇಮನಿ, ಯಲ್ಲಪ್ಪ ಹಳೇಮನಿ, ರಮೇಶ ಚೌಡ್ಕಿ, ಸಿದ್ದಪ್ಪ ಹೊಸಮನಿ, ಮಂಜುನಾಥ ಆರೆಂಟನೂರು, ಶಾಂತಕುಮಾರ್ ದೊಡ್ಡಮನಿ, ರವಿಚಂದ್ರ ಗುಡ್ಲಾನೂರು, ಸಿದ್ದಪ್ಪ ಕಾಮನೂರು, ರಮೇಶ ಗಿಣಿಗೇರಿ ಇನ್ನಿತರರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net