ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಆಗಲಿ ಕ್ರಮ

IMG-20241018-WA0039
Published on

ಕೊಪ್ಪಳ: ಪ್ರವಾದಿ ಮಹಮ್ಮದ್​ ಪೈಗಂಬರ್​ ವಿರುದ್ಧ ಅವಹೇಳನಕಾರಿಯಾಗಿ ನಿಂದನೆ ಮಾಡಿದ ಉತ್ತರಪ್ರದೇಶದ ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಮ್​ ಸಮುದಾಯ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಉತ್ತರ ಪ್ರದೇಶದಲ್ಲಿ ಸ್ವಾಮಿ ನರಸಿಂಹಾನಂದ ಮುಸ್ಲಿಮರ ಆರಾಧಕ ಪ್ರವಾದಿ ಮಹಮ್ಮದ್​ ಪೈಗಂಬರ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಸಮಸ್ತ ಮುಸ್ಲಿಮರಿಗೆ ನೋವುಂಟು ಮಾಡಿದೆ. ಕೋಮು ಪ್ರಚೋದನೆ ನೀಡುವಂತೆ ಮಾತನಾಡುವುದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಲಿದೆ. ಶಾಂತಿ ಭಂಗವಾಗಲಿದೆ. ಕಾನೂನು, ಸುವ್ಯವಸ್ಥೆ ಹಾಳಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯತಿ ವಿರುದ್ಧ ರಾಷ್ಟ್ರಪತಿಗಳು ಹಾಗೂ ಉತ್ತರ ಪ್ರದೇಶ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಗಲ್ಲು ಶಿೆ ವಿಧಿಸಬೇಕು. ಕೋಮು ಪ್ರಚೋದನೆ ಮಾಡುವುದನ್ನು ತಡೆಯಬೇಕು. ಎಲ್ಲ ಧರ್ಮಗಳು, ಪ್ರವಾದಿಗಳಿಗೆ ಗೌರವ ಕೊಡುವಂತೆ ಸೂಚಿಸಬೇಕು. ಶಾಂತಿ ಕದಡುವ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ನಗರದ ಗಡಿಯಾರ ಕಂಬ ವೃತ್ತದಿಂದ ಜವಾಹರ ರಸ್ತೆ ಮೂಲಕ ಅಶೋಕ ವೃತ್ತವರೆಗೆ ಸಾವಿರಾರು ಮುಸ್ಲಿಮರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾದರು. ಪ್ರತಿಭಟನೆ ಬಳಿಕ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮನವಿ ಸ್ವೀಕರಿಸಲು ಆಗಮಿಸಿದರು. ಈ ವೇಳೆ ಡಿಸಿ ಆಗಮಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಬಳಿಕ ಎಡಿಸಿ ಸಿದ್ರಾಮೇಶ್ವರ ಆಗಮಿಸಿ ಮನವಿ ಸ್ವೀಕರಿಸಿದರು.

ಮುಫ್ತಿ ನಜೀರ ಅಹ್ಮದ್​ ಖಾದ್ರಿ ತಸ್ಕಿನ್​, ಹಾಫಿಜ್​ ಮೊಯಿದ್ದೀನ್​ ತಸ್ಕಿನ್​, ನೂರ್​ ಉಲ್ಲಾ ತೆಹಸಿನ, ಅಸದ್​ ಉಲ್ಲಾ ತೆಹಸಿನ, ಹಾಫಿಜ್​ ನಾಸಿರ ಅಹ್ಮದ, ಖಾಜಿ ಮೈನುದ್ದೀನ್​, ಹಾಫಿಜ್​ ಸಮೀರ್​ ಉಲ್ಲಾ, ಹಾಫೀಜ್​ ಸೈಯದ್​ ಫಯಾಜ್​ ಅಹ್ಮದ್​, ವಕೀಲರಾದ ಆಸೀಫ ಅಲಿ, ಜಿಲ್ಲಾ ವಕ್ಫ ಬೋರ್ಡ್​ ಅಧ್ಯಕ್ಷ ಪೀರಾಹುಸೇನ ಹೊಸಳ್ಳಿ , ಕೆ.ಎಂ.ಸೈಯದ್​, ಸಲಿಂ ಮಂಡಲಗೇರಿ, ಸಲೀಂ ಖಾದ್ರಿ , ಇಮ್ರಾನ್​ ಅರಗಂಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net