

ಕೊಪ್ಪಳ: ಮುನಿರಾಬಾದ್ ತುಂಗಭದ್ರಾ ಜಲಾಶಯ ಗೇಟ್ ಕಳಚಿದ್ದು, ತಕ್ಷಣ ರಿಪೇರಿ ಕೆಲಸ ಮಾಡಲಾಗುತ್ತಿದೆ. ರೈತರಿಗೆ ಒಂದು ಬೆಳೆಗೆ ನೀರು ಕೊಡಲಾಗುವುದೆಂದು ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ತಾಲೂಕಿನ ಮುನಿರಾಬಾದ್ ಜಲಾಶಯಕ್ಕೆ ಭೇಟಿ ನೀಡಿ ಕಳಚಿದ ಗೇಟ್ ವೀಕ್ಷಿಸಿ ಮಾತನಾಡಿದರು
12 ಲಕ್ಷಎಕರೆ ನೀರಾವರಿ ಇದೆ. ಡ್ಯಾಂ ಉತ್ತಮವಾಗಿದೆ. ಹಳೇಯ ಡ್ಯಾಂ. ಮೂರು ರಾಜ್ಯಸವರ ನಡುವೆ ಇದೆ. ನಿನ್ನೆ ರಾತ್ರಿ ೧೦ ಗೇಟ್ ಮೂಲಕ ನೀರು ಹೊರ ಬಿಡಲಾಗಿತ್ತು. ಮಧ್ಯರಾತ್ರಿ ೧೯ನೇ ಗೇಟ್ ಕಳಚಿಕೊಂಡಿದೆ. ತಕ್ಷಣ ನಮ್ಮ ಅಧಿಕಾರಿಗಳು ಬಂದಿದ್ದಾರೆ. ಅಧಿಕಾರಿಗಳು, ಜನಪ್ರನಿಧಿಗಳು ಚರ್ಚಿಸಿ ಅನುಮತಿ ಪಡೆದು ತಕ್ಷಣ ಎಲ್ಲ ಗೇಟ್ ಒಪನ್ ಮಾಡಿ ನೀರು ಬಿಡಲಾಗಿದೆ.
ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ನಾಲ್ಕು ಜಿಲ್ಲೆಗಳಿಗೆ ಮುನ್ನೆಚ್ಚರಿಕೆವಹಿಸಲು ಸೂಚಿಸಲಾಗಿದೆ.
ರಿಪೇರಿಗೆ ಅನುಭವಿಗಳ ಸಂಸ್ಥೆಗೆ ಬಹಿಸಲಾಗಿದೆ. ನಾರಾಯಣ ಇಂಜಿನಿಯರಿಂಗ್ ಹಾಗೂ ಹಿಂದುಸ್ಥಾನ ಕಂಪನಿಗೆ ಡ್ಯಾಂ ಡಿಸೈನ್ ನೀಡಲಾಗಿದೆ. ಅವರು ರಾತ್ರಯೇ ಇಲ್ಲಿಗೆ ಬಂದಿದ್ದಾರೆ. ತಕ್ಷಣ ಕೆಲಸ ಆರಂಭಿಸಲುಸೂಚಿಸಲಾಗಿದೆ.
105 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ 99 ಸಾವಿರ ಕ್ಯೂಸೆಕ್ ಇದೆ. 19ನೇ ಗೇಟ್ ಒಂದರಿಂದಲೇ ೩೫ ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. 28 ಸಾವಿರ ಕ್ಯೂಸೆಕ್ ಒಳಹರಿವಿದೆ. ಹೊಸ ಗೇಟ್ ಅಳವಡಿಸಲು 50-60 ಟಿಎಂಸಿ ಅಡಿ ನೀರು ಬಿಡುವುದು ಅನಿವಾರ್ಯ ವಾಗಿದೆ.
ರೈತರಿಗೆ ಒಂದು ಬೆಳೆಗೆ ನೀರು ಉಳಿಸಬೇಕೆಂದು ತೀರ್ಮಾನಿಸಲಾಗಿದೆ. ನೆರೆ ರಾಜ್ಯಗಳಿಗೆ ಅವರ ಪಾಲಿನ 25 ಟಿಎಂಸಿ ಅಡಿ ನೀರು ಕೊಡಲಾಗಿದೆ. ಇನ್ನು 90 ಟಿಎಂಸಿ ಕೊಡಬೇಕಿದೆ. ರೈತರು ಗಾಬರಿಪಡುವ ಅಗತ್ಯವಿಲ್ಲ. ಮೂರು ಸರ್ಕಾರ ಒಟ್ಟಾಗಿ ಸಮಸ್ಯೆ ನಿವಾರಿಸಲಾಗುವುದು. ರೈತರನ್ನು ಬದುಕಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು. ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು ಸೇರಿ ಇತರರನ್ನು ಬಿಡುವಂತಿಲ್ಲ. ನಿಷೇಧಾಜ್ಞೆ ಮಾಡಲಾಗುವುದು.
ಇದು ತಾಂತ್ರಿಕ ವಿಷಯ. ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
ಮೊದಲು ಗೇಟ್ ಸರಿಪಡಿಸಲಾಗುವುದು. ಆಮೇಲೆ ಬೇರೆ ವಿಷಯ. ಆ.13 ರಂದು ನಾನು, ಸಿಎಂ ಬಾಗಿನ ಅರ್ಪಿಸಬೇಕಿತ್ತು. ಸದ್ಯದ ಸ್ಥಿತಿಯಲ್ಲಿ ಮಾಡುವುದಿಲ್ಲ. 70 ವರ್ಷದಿಂದ ಡ್ಯಾಂ ನಿರ್ವಹಣೆ ಆಗುತ್ತಿದೆ. ಘಟನೆ ಸಂಬಂಧ ಯಾರನ್ನೂ ದೂರುವುದಿಲ್ಲ. ಆಕಸ್ಮಿಕವಾಗಿ ನಡೆದಿದೆ. ಗೇಟ್ ಕಳಚಿದ ತಕ್ಷಣವೇ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೆಲಸ ಮಾಡಿದ್ದಾರೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.