ಸರ್ಕಾರದ ನಿರ್ಲಕ್ಷ್ಯವೇ ಗೇಟ್ ಕಟ್ ಆಗಲು ಕಾರಣ : ಮಾಜಿ‌‌ ಸಚಿವ ಹಾಲಪ್ಪ ಆಚಾರ್ ಆರೋಪ

IMG-20240811-WA0041
Published on

ಕೊಪ್ಪಳ: ಗೇಟ್ ಎಲ್ಲೂ ಕಾಣುತ್ತಿಲ್ಲ. ಉಳಿದ ಗೇಟ್ ಗಳ ಬಳಿ ಬಿರುಕುಗಳಿವೆ. ಆಡಳಿತ ಸರಿಯಾಗಿ‌ ನಿರ್ವಹಣೆ ಮಾಡದಿರುವುದು ದುರಂತ. ಸರ್ಕಾರದ ನಿರ್ಲಕ್ಷ್ಯದಿಂದ ಗೇಟ್ ಕಟ್ ಆಗಿ ಆವಾಂತರ ಸಂಭವಿಸಿದೆ ಎಂದು ಮಾಜಿ ಸಚಿವ ಹಾಲಪ್ಪ‌ಆಚಾರ್ ಆರೋಪಿಸಿದರು.

ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ‌ ನೀಡಿ ಮಾತನಾಡಿದರು.

ಜಲಾಶಯ ನಂಬಿ ರಾಜ್ಯದ ನಾಲ್ಕು ಜಿಲ್ಲೆ, ಮೂರು ರಾಜ್ಯಗಳಿವೆ. ಆದರೆ ಅಧಿಕಾರಿಗಳು ಹಾಗೂ ಸರ್ಕಾರದ‌ ನಿರ್ಲಕ್ಷ್ಯದಿಂದ ರೈತರು ಆತಂಕಕ್ಕೆ ದೂಡಿದೆ. ಇವರು ಏನು ಮಾಡುತ್ತಿದ್ದಾರೆ. ಇಷ್ಟು ಬೇಜಾವ್ದಾರಿ ಆಡಳಿತ ಯಾರು ಮಾಡುತ್ತಾರೆ. ಇದೊಂದು ಅಂತರ ರಾಜ್ಯ ಯೋಜನೆ. ಅಷ್ಟು ನಿರ್ವಹಣೆ ಮಾಡದಿದ್ದರೆ ಸರ್ಕಾರ ಯಾಕೆ ಇರಬೇಕು? ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಕೆವಲ ಗ್ಯಾರಂಟಿ ಕೊಟ್ಟರೆ ಸಾಲದು. ಜೊತೆಗೆ ಇಂಥ ಕಾಮಗಾರಿಗಳಿಗೆ ಅನುದಾನ ಕೊಡಬೇಕು ಎಂದರು.

ಇದು‌ ಯಾರ ನಿರ್ಲಕ್ಷ್ಯದಿಂದ ಆಗಿದೆ. ಅದಕ್ಕೆ ಕಾರಣ ಯಾರು. ಅವರ ವಿರುದ್ಧ ಕ್ರಮ ಆಗಬೇಕು. ಯಾವೊಬ್ಬ ಸಚಿವ ಹಾಗೂ ಸಿಎಂ ಪ್ರತಿಕ್ರಿಯಿಸಿಲ್ಲ. ಡ್ಯಾಂ ನಮ್ಮ ರಾಜ್ಯದಲ್ಲಿದೆ.‌ ಇದರ ಜವಾಬ್ದಾರಿ ನಮ್ಮ ಸರ್ಕಾರದ್ದು. ಸರ್ಕಾರವೇ ಇಲ್ಲಿ‌ ಬಂದು ನಿಲ್ಲಬೇಕು. ಸಮರ್ಥವಾಗಿ ನಿರ್ವಹಣೆ ಮಾಡದಿದ್ದರೆ ಅಧಿಕಾರ ಬಿಟ್ಟು ಹೋಗಿ. ತಕ್ಷಣ ಕೆಲಸ ನಡೆಸಿ‌. ನೀರು ಉಳಿಸುವ ಕೆಲಸ ಮಾಡಬೇಕು. ಇಲ್ಲ ಮೂರು ರಾಜ್ಯದ ಜನ ಬೀದಿಗಿಳಿದಿ ನಿಮ್ಮ ವಿರುದ್ಧ ಹೋರಾಟಕ್ಕಿಳಿಯಲಿದ್ದಾರೆಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net