ಪ್ರತಿ ಹೆಕ್ಟರ್ ಗೆ 50ಸಾವಿರ ರೂ. ಪರಿಹಾರ ನೀಡಿ, ಸರ್ಕಾರಕ್ಕೆ ಬಿ.ವೈ.ವಿಜಯೇಂದ್ರ ಆಗ್ರಹ

New Vijayendra New 11
Published on

ಕೊಪ್ಪಳ: ರಾಜ್ಯ ಸರ್ಕಾರವೇ ಮುನಿರಾಬಾದ್ ಟಿನಿ ಡ್ಯಾಂ ಜಲಾಶಯದ ಗೇಟ್ ತುಂಡಾದ ಘಟ‌ನೆ ಜವಾಬ್ದಾರಿ ಹೊರಬೇಕು. ಜತೆಗೆ ರೈತರಿಗೆ ಪ್ರತಿ ಹೆಕ್ಟರ್ ಗೆ 50 ಸಾವಿರ ರೂ. ಪರಿಹಾರ ನೀಡಬೇಕೆಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ತಾಲೂಕಿನ ಮುನಿರಾಬಾದ್ ಟಿಬಿ ಡ್ಯಾಂಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ತುಂಗಭದ್ರಾ ಜಲಾಶಯ ಕಕ ಭಾಗದ ಜೀವನಾಡಿ. ಮೂರು ರಾಜ್ಯದ ರೈತರಿಗೆ ವರವಾಗಿದೆ. ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಯ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ. ವರುಣನ ಕೃಪೆಯಿಂದ ಜಲಾಶಯ ಭರ್ತಿಯಾಗಿ ರೈತರು ಸಂತಸದಿಂದ ಇದ್ದರು. ಎರಡು ಬೆಳೆ ಬೆಳೆವ ನಿರೀಕ್ಷೆಯಲ್ಲಿದ್ದರು. ಗೇಟ್ ಕಳಚಿ ಬಿದ್ದು ಆತಂಕ ತಂದಿದೆ ಎಂದರು.

ನಾನು ಡಿಕೆಶಿ ಅವರ ಮಾತು ಕೇಳಿದೆ. ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಆಗಿದೆ. ಇದಕ್ಕೆ ಹೊಣೆ ಯಾರು? ಡಿಕೆಶಿ ಯಾರನ್ನೂ ಹೊಣೆ ಮಾಡಲ್ಲ ಎನ್ನುತ್ತಾರೆ. ಹಾಗಾದರೆ ಯಾರು ಹೊಣೆ. ಸರ್ಕಾರವೇ ಇದಕ್ಕೆ ಹೊಣೆ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೆಕ್ಟರ್ ಗೆ ೫೦ ಸಾವಿರ ರೂ. ಪರಿಹಾರ ಕೊಡಬೇಕು ಎಂದು ಸಿಎಂ, ಡಿಸಿಎಂ ಗೆ ಆಗ್ರಹಿಸಿದರು.

ನಿತ್ಯ98 ಕ್ಯೂಸೆಕ್ ನೀರು ನಿತ್ಯ ಪೋಲಾಗುತ್ತಿದೆ. ರಾಜ್ಯ ಸರ್ಕಾರದ ಹೊಣೆಗೇಡಿತನದಿಂದ ಅವಘಡ ನಡೆದಿದೆ. ಒಂದು ವರ್ಷದಿಂದ ಸಿಇ ನೇಮಕ ಆಗಿಲ್ಲ. ಇವರು ಜಲದ ಬಗ್ಗೆ ಗಮನ ನೀಡುತ್ತಿಲ್ಲ. ಕೇವಲ ಸಂಪನ್ಮೂಲ ಬಗ್ಗೆ ಗಮನ ನೀಡುತ್ತಿದ್ದಾರೆಂದು ಆರೋಪಿಸಿದರು.

ತಜ್ಞರು ನೀಡಿದ ವರದಿ ಯಾಕೆ ಪರಿಗಣಿಸಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸರ್ಕಾರದ್ದು. ಬೋರ್ಡ್ ಮೇಲೆ ಹಾಕುವ ಬದಲು ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಲಿ. ನಾವೇನು ರಾಜಕಾರಣ ಮಾಡಲು ಬಂದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂಬುದು ನಮ್ಮ ಆಶಯ. ಅಧಿಕಾರಿಗಳ ಜತೆ ಬೊಮ್ಮಾಯಿಯವರು ಚರ್ಚಸಿ ಸಲಹೆ ನೀಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net