ಜಲಾಶಯ ವಿಷಯದಲ್ಲಿ ರಾಜಕೀಯ ಬೇಡ, ಸಚಿವ ಶಿವರಾಜ ತಂಗಡಗಿ ಮನವಿ

IMG-20240811-WA0067
Published on

ಕೊಪ್ಪಳ: ಮುನಿರಾಬಾದ್ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ‌ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅನೇಕರು ಸಲಹೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರು ಸಲಹೆ ನೀಡಲಿ ಸ್ವೀಕರಿಸುತ್ತೇವೆ. ಅದು ಬಿಟ್ಟು ರಾಜಕೀಯ ಮಾಡಬಾರದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಮುನಿರಾಬಾದ್ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಎರಡು ರೀತಿಯಿಂದ ‌ದುರಸ್ಥಿ ಕಾರ್ಯದ ಬಗ್ಗೆ ಚಿಂತನೆ ನಡೆಸಿದ್ದೇವೆ. ಡ್ಯಾಂ ನೀರನ್ನು ಖಾಲಿ ಮಾಡಿ ಹೊಸ ಗೇಟ್ ಅಳವಡಿಸೋದು. ಇಲ್ಲವೇ ನೀರು ಖಾಲಿಯಾಗದಂತೆ ನೋಡಿಕೊಂಡು ನೀರಲ್ಲಿಯೇ ಹೊಸ ಗೇಟ್ ಅಳವಡಿಸೋದು. ನೀರು ಇರುವಾಗಲೇ ದುರಸ್ತಿ ಗಾಗಿ ಈಗಾಗಲೇ‌ ಗೇಟ್ ರಡಿಯಾಗುತ್ತಿದೆ. ಹೊಸಪೇಟೆಯಲ್ಲಿ ಗೇಟ್ ಮಾಡೋ ಕೆಲಸವಾಗುತ್ತಿದೆ. ಅನೇಕ ತಜ್ಞರು ಈಗಾಗಲೇ ಡ್ಯಾಮ ಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆಂದರು.

ಸಿಎಂ ಕೂಡಾ ಪ್ರತಿನಿತ್ಯ ಮೂರು ಸಲ ಮಾಹಿತಿ ಪಡೆಯುತ್ತಿದ್ದಾರೆ. ಡ್ಯಾಂ ಸುರಕ್ಷಿತೆ ಮತ್ತು ರೈತರ ಹಿತ ಕಾಪಾಡಲು ಬೇಕಾದ ಎಲ್ಲಾ ಕೆಲಸ ಹಗಲು ರಾತ್ರಿ ಮಾಡುತ್ತಿದ್ದೇವೆ. ಇನ್ನು ಬಿಜೆಪಿ ನಾಯಕರು ಡ್ಯಾಂ ಗೆ ಬಂದು ಸಲಹೆ ನೀಡಲಿ. ಅವರ ಪ್ರತಿಯೊಂದು ಸಲಹೆಯನ್ನು ಸ್ವೀಕಾರ ಮಾಡುತ್ತೇವೆ. ಆದರೆ, ಡ್ಯಾಂ ಗೆ ಬಂದು ರಾಜಕೀಯ ಮಾಡಬಾರದು. ಅವರು ರಾಜಕೀಯ ಮಾತನಾಡಿದರೆ, ನಾವು ರಾಜಕೀಯ ಮಾತನಾಡಬೇಕಾಗುತ್ತದೆ ಎಂದರು.

ಟಿ ಬಿ ಬೋರ್ಡ್ ಕಂಟ್ರೋಲ್ ಇರೋದು ಕೇಂದ್ರ ಸರ್ಕಾರ ಅಧೀನದಲ್ಲಿ. ಡ್ಯಾಂ ದುರಸ್ತಿ ಸೇರಿದಂತೆ ಎಲ್ಲಾ ಕೆಲಸ ಅವರೇ ಮಾಡಬೇಕು. ನಾವು ಪ್ರತಿವರ್ಷ ಬೋರ್ಡ್ ನವರು ಕೇಳಿದಷ್ಟು ಹಣ ಕೊಡ್ತೇವೆ. ಇದನ್ನು ಅರ್ಥ ಮಾಡಿಕೊಂಡು ಮಾತನಾಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net