ಫೋಟೋಕ್ಕಾಗಿ ಜನರ ಹುಚ್ಚಾಟ, ಅಧಿಕಾರಿಗಳಿಗೆ ಪ್ರಾಣ ಸಂಕಟ

IMG_20240811_082248
Published on

ಕೊಪ್ಪಳ: ಮುನಿರಾಬದ್ ಜಲಾಶದ ಗೇಟ್ ತುಂಡಾದ ವಿಷಯ ತಿಳಿದು ಜನರು ಸಾಗರೋಪಾದಿಯಲ್ಲಿ ಜಲಾಶಯದತ್ತ ಧಾವಿಸುತ್ತಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು ಅಧಿಕಾರಿಗಳಿಗೆ ಪ್ರಾಣ ಸಂಕಟ ತಂದಿದೆ.

ಸದ್ಯ ಜಲಾಶಯದ 29 ಗೇಟ್ ಗಳಿಂದ ಅಪಾರ ನೀರು‌ಬಿಡಲಾಗುತ್ತಿದೆ. ಜಲಾಶಯ ಮುಂಭಾಗದ ಹಳೇ ಸೇತುವೆ ಮುಳುಗುವ ಭೀತಿ ಶುರುವಾಗಿದೆ. ಅದರ ಮೇಲೆ ನಿಂತುಕೊಂಡೇ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಎಡದಂಡೆ ಕಾಲುವೆ ನೀರು ಬಿಡುಗಡೆ ಸ್ಥಳಕ್ಕೂ ಆಗಮಿಸುತ್ತಿದ್ದಾರೆ.

ಮುನಿರಾಬಾದ್ ಗ್ರಾಮದಿಂದ ಜಲಾಶಯ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜಲಾಶಯದ ಗೇಟ್ ಗಳಿರುವ ಭಾಗದಲ್ಲಿ ವಾಹನಗಳ ಸಂಚಾರ ನಿಷೇಧಿಸಿದೆ. ಕೇವಲ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ತಜ್ಞರನ್ನು ಬಿಡಲಾಗುತ್ತಿದೆ. ಉಳಿದಂತೆ ಎಲ್ಲರನ್ನು ನಿರ್ಬಂಧಿಸಲಾಗಿದೆ.

ಅಪಾಯದ ಸೂಚನೆ: ಗೇಟ್ ಕಳಚಿ ಬಿದ್ದ ಪರಿಣಾಮ ಅಪಾರ ನೀರು 19 ನೇ ಗೇಟ್ ನಿಂದ ಹೊರ ಹೋಗುವ ನೀರಿನ ನಿಯಂತ್ರಣ ಅಸಾಧ್ಯವಾಗಿದೆ. ಈ ಗೇಟ್ ಮೇಲಿನ ಒತ್ತಡ ಕಡಿತಗೊಳಿಸಲು 29 ಗೇಟ್ ಗಳನ್ನು ತಲಾ 2 ಅಡಿ ಎತ್ತರಿಸಿ 1 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. 19ನೇ ಗೇಟ್ ಬಳಿ ಕಂಪನ ಉಂಟಾಗು ಸಾಧ್ಯತೆಯುದೆ. ಹೀಗಾಗಿ ಹೆಚ್ಚು ಜನರ ಸಂಚಾರ ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net