ನಾಲ್ಕು ದಿನದಲ್ಲಿ ಗೇಟ್ ಸಿದ್ಧ : ಕಾಡಾಧ್ಯಕ್ಷ‌ ಹಸನಸಾಬ್ ದೋಟಿಹಾಳ

IMG-20240811-WA0047
Published on

ಕೊಪ್ಪಳ: ಮುಜನಿರಾಬಾದ್ ಜಲಾಶಯದ 19ನೇ ಗೇಟ್ ತುಂಡಾಗಿದೆ‌. ಈಗಾಗಲೇ ಗೇಟ್ ಸಿದ್ಧಪಡಿಸಲು ಆರ್ಡರ್ ನೀಡಿದ್ದೇವೆ. ನಾಲ್ಕು ದಿನದಲ್ಲಿ ಗೇಟ್ ಸಿದ್ಣದವಾಗಲಿದೆ ಎಂದು ಮುನಿರಾಬಾದ್ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ ತಿಳಿಸಿದರು.
ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಮಾತನಾಡಿದರು.

ಈಗಾಗಲೇ ಗೇಟ್ ರೆಡಿ ಮಾಡಲು ಆರ್ಡರ್ ನೀಡಲಾಗಿದೆ. ನಾಲ್ಕು ದಿನದಲ್ಲಿ ‌ಗೇಟ್ ಸಿದ್ದವಾಗಲಿದೆ.

ಮುಂಬೈ ಮೂಲದ ಕಂಪನಿಗೆ ಗೇಟ್ ಮಾಡಲು ಆರ್ಡರ್ ನೀಡಲಾಗಿದೆ. ಆದಷ್ಟು ಬೇಗನೆ ‌ಹೊಸ ಗೇಟ್ ಕೂರಿಸುವ ಕೆಲಸ ಮಾಡಲಾಗುತ್ತದೆ. ಹೈದರಾಬಾದ್ ಸೇರಿದಂತೆ ಅನೇಕ ಕಡೆಯಿಂದ ತಜ್ಞರು ಕೂಡಾ ಬರ್ತಿದ್ದಾರೆ. ಘಟನೆಗೆ ಕಾರಣವೇನು, ಯಾರ ತಪ್ಪಿನಿಂದ ಆಗಿದೆ ಅನ್ನೋದನ್ನು ಅನಂತರ ತನಿಖೆ ಮಾಡಿಸುತ್ತೇವೆ.

ಸದ್ಯ ನೀರು ಖಾಲಿಯಾಗದಂತೆ ಗೇಟ್ ಕೂರಿಸುವ ಕೆಲಸವನ್ನು ಆರಂಭಿಸಲಾಗುತ್ತಿದೆ. ಒಂದನೇ ಬೆಳೆಗೆ ಬೇಕಾದ ನೀರನ್ನು ಕೊಡಲಾಗುವದು. ಮುಂದಿನ ದಿನದಲ್ಲಿ ಮಲೆನಾಡಿನಲ್ಲಿ ಮಳೆಯಾಗೋ ಸೂಚನೆ ಇದೆ. ಹೀಗಾಗಿ ‌ಡ್ಯಾಂಗೆ ನೀರು ಹರಿದು ಬರೋ‌ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net