ಕ್ಷಯ ನಿಯಂತ್ರಣಕ್ಕೆ ಸಹಾಯವಾಣಿ ಸಹಕಾರಿ; ಸಂಸದ ಸಂಗಣ್ಣ ಕರಡಿ ಭರವಸೆ

04012021 Koppal Tuberculosis Helpline Opening
Published on

ಕ್ಷಯರೋಗ ಸಹಾಯವಾಣಿ ಉದ್ಘಾಟನೆ

ಕೊಪ್ಪಳ: ಅಪೌಷ್ಟಿಕತೆ, ಮದ್ಯಪಾನ, ಧೂಮಪಾನದಿಂದ ಕ್ಷಯ ರೋಗ ಬರುವ ಸಾಧ್ಯತೆ ಅಧಿಕವಿದ್ದು, ಇದರ ನಿಯಂತ್ರಣಕ್ಕೆ ಡಿಜಿಟಲ್ ಕ್ಷ-ಕಿರಣ ಕೊಠಡಿ ಮತ್ತು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಸಹಕಾರಿ ಆಗಲಿವೆ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಿಜಿಟಲ್ ಕ್ಷ-ಕಿರಣ ಕೊಠಡಿ ಮತ್ತು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ ಮಾಡಲು ಖಾಸಗಿ ವೈದ್ಯರು ಸಹಕಾರ ನೀಡಿರುವುದು ಅಭಿನಂದನೀಯ. ಕ್ಷಯರೋಗ ಪತ್ತೆಗೆ ಬೇಕಾಗುವ ಎಲ್ಲ ಉಪಕರಣಗಳನ್ನು ಹೊಂದಿದ ರಾಜ್ಯದ 6ನೇ ಜಿಲ್ಲೆ ಕೊಪ್ಪಳ. ಆಧುನಿಕ ಚಿಕಿತ್ಸೆ ಬಳಸಿ ಕ್ಷಯ ಮುಕ್ತಗೊಳಿಸಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.

ಜಿಪಂ ಉಪಾಧ್ಯಕ್ಷೆ ಬೀನಾ ಗೌಸ್ ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ್ ಭೋಲಾ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಡಿಎಚ್‌ಒ ಡಾ.ಟಿ.ಲಿಂಗರಾಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಜಿ.ಮಹೇಶ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಇರ್ಫಾನಾ ಅಂಜುಮ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಜುಮ್ಮಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net