

ಕೊಪ್ಪಳ: ಸರ್ಕಾರ ಮಹಿಳೆಯರಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆಯುವಂತೆ ಸಂಸದ ರಾಜಶೇಖರ ಹಿಟ್ನಾಳ ಸಲಹೆ ನೀಡಿದರು.
ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಗ್ರಾಪಂನಿಂದ ಅನುಷ್ಠಾನಗೊಳಿಸಿದ ಸಂಜೀವಿನಿ ಕಾಮನ್ ವರ್ಕ್ ಶೆಡ್ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಎನ್ಆರ್ಎಲ್ಎಂ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಅನೇಕ ಯೋಜನೆ ರೂಪಿಸಲಾಗಿದೆ. ಒಕ್ಕೂಟಗಳ ಮೂಲಕ ಅನುಷ್ಠಾನ ಮಾಡುತ್ತಿದ್ದು, ಎಲ್ಲರೂ ಅವುಗಳ ಸದುಪಯೋಗ ಪಡೆಯಿರಿ. ಆರ್ಥಿಕವಾಗಿ ಸಬಲರಾಗಿದೆ. ಮಹಿಳೆಯರು ಅಭಿವೃದ್ಧ ಆದಲ್ಲಿ ದೇಶ ಅಭಿವೃದ್ಧಿ ಆದಂತೆ. ಗ್ರಾಪಂ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ತಾಪಂ ಮಾಜಿ ಸದಸ್ಯ ಮೂರ್ತೆಪ್ಪ ಗಿಣಿಗೇರಿ, ಗ್ರಾಪಂ ಅಧ್ಯೆ ಸುಜಾತ ಹೊಸಪೇಟೆ, ಉಪಾಧ್ಯಕ್ಷ ರಾಜಶೇಖರ ಬಂಡಿಹಾಳ, ಸದಸ್ಯರಾದ ಧರ್ಮಗೌಡ ಪೊ.ಪಾ., ಬಾಬಣ್ಣ, ಗೌಸ್ ಮೈನುದ್ದೀನ್, ಚಂದ್ರಶೇಖರ, ಆನಂದ ರೌದಿ, ಭಾಗ್ಯ, ರತ್ನಾ, ಜಂಬಣ್ಣ ಉಪ್ಪಾರ, ಮಂಜಣ್ಣ, ಪಿಡಿಒ ಸೋಮಶೇಖರ, ಸಂಜೀವಿನಿ ತಾಲೂಕು ಯೋಜನಾ ವ್ಯವಸ್ಥಾಪಕ ಸುನೀಲ್, ನವೀನ್ ಶಿಳ್ಳಿನ್ ಇತರರಿದ್ದರು.