ಕದ್ದ ಮೊಬೈಲ್​ನಿಂದ ಹಣ ಎಗರಿಸಿದ ಚಾಲಾಕಿ

Published on

ಕೊಪ್ಪಳ: ಬಸ್​ನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್​ ಕದ್ದ ಕಳ್ಳರು ಅದೇ ಮೊಬೈಲ್​ನಲ್ಲಿನ ೋನ್​ ಪೇ ಆ್ಯಪ್​ ಬಳಸಿ 2.39 ಲಕ್ಷ ರೂ. ಎಗರಿಸಿದ್ದು ಸೈಬರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ ಶಂಕ್ರಪ್ಪ ಹಕ್ಕಂಡಿ ಬಸ್​ನಲ್ಲಿ ಪ್ರಯಾಣಿಸುವಾಗ ಮೇ 15ರಂದು ಮೊಬೈಲ್​ ಕಳೆದುಕೊಂಡಿದ್ದಾರೆ. ಮೊಬೈಲ್​ನಲ್ಲಿ ತಮ್ಮ ಎಸ್​ಬಿಐ ಬ್ಯಾಂಕ್​ ಖಾತೆಗೆ ೋನ್​ ಪೇ ಲಿಂಕ್​ ಮಾಡಿದ್ದರು. ಅದರ ಮೂಲಕ ಡಿಜಿಟಲ್​ ವಹಿವಾಟು ನಡೆಸುತ್ತಿದ್ದರು. ಮೊಬೈಲ್​ ಕದ್ದವರು ೋನ್​ ಪೇ ಆ್ಯಪ್​ ಬಳಸಿ ಶಂಕ್ರಪ್ಪ ಖಾತೆಯಲ್ಲಿದ್ದ 2,39,097 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಮೇ 15ರಿಂದ 18ವರೆಗಿನ ಮೂರು ದಿನದಲ್ಲಿ ಹಣ ವರ್ಗಾವಣೆ ಆಗಿದೆ. ಈಬಗ್ಗೆ ಮಾಹಿತಿ ತಿಳಿಯುತ್ತಲೇ ಸೈಬರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net