ಕೇಂದ್ರದಿಂದ ಮಲತಾಯಿ ಧೋರಣೆ, ಸಚಿವ ತಂಗಡಗಿ ಆರೋಪ

minister-shivaraj-tangadagi-congress-bjp-central govt dont give droughts relief
minister-shivaraj-tangadagi-congress-bjp-central govt dont give droughts relief
Minister Shivaraj Tangadagi
Published on

ಕೊಪ್ಪಳ: ಬರ ವಿಷಯದಲ್ಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನರೇಗಾದಡಿ ಪ್ರತಿ ಕುಟುಂಬಕ್ಕೆ ನೀಡುವ ಕೆಲಸವನ್ನು 150 ದಿನಗಳವರೆಗೆ ಹೆಚ್ಚಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲವೆಂದು ಸಚಿವ ತಂಗಡಗಿ ಆರೋಪಿಸಿದರು.

ನರೇಗಾ ಕಾಯ್ದೆ ಪ್ರಕಾರ ಬರ ಸ್ಥಿತಿ ಇರುವಾಗ 150ದಿನಗಳಿಗೆ ಮಾನವ ದಿನಗಳನ್ನು ಹೆಚ್ಚಿಸಬೇಕು. ನಮ್ಮ ಜಿಲ್ಲೆಯಲ್ಲಿ ಈಗಾಗಲೇ 78.37 ಮಾನವ ದಿನಗಳನ್ನು ಸೃಜಿಸಲಾಗಿದೆ. ಶೇ.95ರಷ್ಟು ಪ್ರಗತಿ ಆಗಿದೆ. ಮುಂದೆ ಜನರಿಗೆ ಕೂಲಿ ಕೆಲಸ ನೀಡಲು ಆಗುವುದಿಲ್ಲ. ಇದೆಲ್ಲವನ್ನು ಕೇಂದ್ರ ಅವಲೋಕಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ 261 ಕೋಟಿ ರೂ. ಬರ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಹೋಗಿ ಬಹಳ ದಿನಗಳಾಗಿವೆ. ಇದನ್ನು ಬಿಜೆಪಿಯವರು ಪ್ರಶ್ನಿಸುತ್ತಿಲ್ಲ. ರಾಜ್ಯ ಸರ್ಕಾರದ ಮೇಲೆ ಗೂಬೆ ಕೂಡಿಸುತ್ತಿದ್ದಾರೆ. ಕೇಂದ್ರವನ್ನು ಒತ್ತಾಯಿಸಿ ರಾಜ್ಯಕ್ಕೆ ಅನುದಾನ ತರುತ್ತಿಲ್ಲ. ಹೊದಲ್ಲಿ ಒಣ ದಂಡು ಹಿಡಿದು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳಿಗೆ ನೀರು ಬಿಡುವಂತೆ ವಿವಿಧ ಕಾರ್ಖಾನೆಗಳ ಪ್ರತಿನಿಧಿಗಳು ಸಚಿವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಂಗಡಗಿ, ನಮಗೆ ರೈತರ ಹಿತ ಮುಖ್ಯ. ನ.3ವರೆಗೆ ರೈತರ ಬೆಳೆಗಳಿಗೆ ನೀರು ಹರಿಸಲಾಗುವುದು. ನಂತರ ಕುಡಿವ ನೀರಿನ ಲಭ್ಯತೆ ನೋಡಿಕೊಂಡು ಅವರ ಪ್ರಸ್ತಾವನೆ ಪರಿಶೀಲಿಸಲಾಗುವುದೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net