ಜಿಲ್ಲಾದ್ಯಂತ ರಕ್ಷಾ ಬಂಧನದ ಸಂಭ್ರಮ: ಸಚಿವ, ಸಂಸದ, ಶಾಸಕರಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿಯರು

22082021 koppal rakhi
Published on


ಕೊಪ್ಪಳ: ಜಿಲ್ಲಾದ್ಯಂತ ಭಾನುವಾರ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು, ಹೆಣ್ಣುಮಕ್ಕಳು ಸಹೋದರರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿದರು.

ಹಬ್ಬ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಬಣ್ಣ ಬಣ್ಣದ ರಾಖಿಗಳು ರಾರಾಜಿಸಿದವು. 10 ರೂ.ಯಿಂದ ನೂರು ರೂ.ಗೂ ಹೆಚ್ಚಿನ ಮೊತ್ತದ ರಾಖಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದವು. ಫೋಟೋ ಅಳವಡಿಸುವ ರಾಖಿಗಳು ಗಮನಸೆಳೆದವು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಯೋಗಿನಿ ಮತ್ತು ತಂಡದವರು ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ಮುಖಂಡ ಅಮರೇಶ ಕರಡಿ ಸೇರಿದಂತೆ ಹಲವರಿಗೆ ರಾಖಿ ಕಟ್ಟಿ ಹಬ್ಬದ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net