ಸೈನಿಕ ತರಬೇತಿ ಉಚಿತ

Published on

ಕೊಪ್ಪಳ : ಜೈ ನರೇಂದ್ರ ಯುವಜನ ಹಿತ ಸಂಸ್ಥೆ ಬಾಗಲಕೋಟೆ ಹಾಗೂ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಯುವ ಮಾರ್ಗ ಉಚಿತ ಸೈನಿಕ ತರಬೇತಿ ಕೇಂದ್ರದಿಂದ ಬೆಳಗಾವಿ ಎ.ಆರ್​.ಒ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿ ಮುಖ್ಯ ತರಬೇತಿದಾರ ಕೆ.ರಾಘವೇಂದ್ರ ಹೇಳಿದರು.

ಡೆಮೊ ರ್ಯಾಲಿಯಲ್ಲಿ ಆಯ್ಕೆಯಾದ 100 ವಿದ್ಯಾರ್ಥಿಗಳಿಗೆ ಮಳೆ ಮಲ್ಲೇಶ್ವರ ದೇವಸ್ಥಾನದ ಬಳಿ 60 ದಿನ ಉಚಿತ ತರಬೇತಿ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ, ವಸತಿ, ಕೋಚಿಂಗ್​, ವ್ಯಕ್ತಿತ್ವ ವಿಕಸನ ಶಿಬಿರ, ಯೋಗ ತರಗತಿ, ಉಡುಪು, ನಿಕ್ಯಾಪ್​ ಸೇರಿ ಇತರ ಸೌಲಭ್ಯ ನೀಡಲಾಗುವುದು. ಊಟದ ಖರ್ಚು 7,200ರೂ. ಭರಿಸಬೇಕು. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ ಮೊ.ಸಂ: 9606816822, 7259265312, 9148112961ಗೆ ಸಂಪರ್ಕಿಸಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಸ್ಥೆಯ ಭೀಮರಾಜ ರಡ್ಡೇರ, ವಿನೋದ ಗುಂಡ್ಲೂರು, ಶ್ರೀಶೈಲ ಕಲಬುರ್ಗಿ, ಆಕಾಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net