ಗೌರವ ಧನ ಹೆಚ್ಚಳ ಮಾಡಿ

IMG-20240922-WA0071
Published on

ಕೊಪ್ಪಳ: ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಗೌರವ ಧನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಮೂಲಕ ಸರ್ಕಾರಕ್ಕೆ ಮನಿವಿ ಸಲ್ಲಿಸಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ 6ನೇ ಗ್ಯಾರಂಟಿಯಾಗಿ ಬಿಸಿಯೂಟ ನೌಕರರ ಗೌರವ ಧನ 6ಸಾವಿರ ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಬೇಸಿಗೆ ರಜೆಯಲ್ಲಿ ಎರಡು ತಿಂಗಳು ಕೆಲಸ ಮಾಡಿದರೂ ಗೌರವ ಧನ ನೀಡಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ತರಬೇತಿ ಪ್ರಯಾಣ ಭತ್ಯೆ ನೀಡಿಲ್ಲ. ಮುಖ್ಯ ಅಡುಗೆದಾರರನ್ನು ಜಂಟಿ ಖಾತೆಯಿಂದ ಕೈ ಬಿಟ್ಟು ಅನ್ಯಾಯ ಮಾಡಿದ್ದಾರೆಂದು ದೂರಿದರು.

ಬಾಕಿ ಗೌರವಧನ ನೀಡಿ. ಕೊಟ್ಟ ಮಾತಿನಂತೆ 6ಸಾವಿರ ರೂ.ಗೆ ವೇತನ ಹೆಚ್ಚಿಸಿ. ಮುಖ್ಯ ಅಡುಗೆದಾರ, ಮುಖ್ಯ ಶಿಕ್ಷಕರ ಜಂಟಿ ಖಾತೆ ಮುಂದುವರಿಸಿ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಡುಗೆದಾರರನ್ನು ನೇಮಿಸಿ. ಅಡುಗೆ ಕೆಲಸ ಬಿಟ್ಟು ಬೇರೆ ಕೆಲಸ ಹಚ್ಚಬಾರದು. ಪ್ರಯಾಣ ಭತ್ಯೆ ಬಿಡುಗಡೆ ಮಾಡಿ. ಆಹಾರ ಸಾಮಗ್ರಿ ವಿತರಣೆ ವೇಳೆ ತೂಕ ಹಾಕಿ. ಬಿಸಿಯೂಟ ನೌಕರರ ಮೇಲಿನ ದೌರ್ಜನ್ಯ ತಡೆಯಿರಿ ಎಂದು ಆಗ್ರಹಿಸಿದರು.

ಹೋರಾಟಗಾರರಾದ ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಸಂಜಯದಾಸ್​, ರಾಮಲಿಂಗಾ ಶಾಸ್ತ್ರಿ, ಮುತ್ತು ಹಡಪದ, ಮಕ್ಬೂಲ್​ ರಾಯಚೂರು, ಶೇಖಪ್ಪ ಬೇಟಗೇರಿ, ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ನೀಲಮ್ಮ ಕಾರಟಗಿ, ತಾಹೇರಾ ಗಂಗಾವತಿ, ರೇಣುಕಾ ಕಾರಟಗಿ, ನಿರ್ಮಲಾ, ದುರ್ಗಮ್ಮ, ಶರಣಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net