ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ

090920 Koppal Fine on Without Mask
ಕೊಪ್ಪಳ ನಗರಲ್ಲಿ ಮಾಸ್ಕ್ ದರಿಸದೇ ಓಡಾಡುತ್ತಿದ್ದ ಬೈಕ ಸವಾರರನ್ನು ಪೊಲೀಸರು ತಡೆದು ಮಂಗಳವಾರ ದಂಡ ವಿಧಿಸಿದರು.
Published on

ಕೊಪ್ಪಳ: ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಡೆದು ನಗರದಲ್ಲಿ ಮಂಗಳವಾರ ಪೊಲೀಸರು ದಂಡ ವಿಧಿಸಿದರು.

ನಗರದ ಅಶೋಕ ವೃತ್ತ, ಬಸವೇಶ್ವರ ವೃತ್ತ, ಗಡಿಯಾರ ಕಂಬ ಹಾಗೂ ಕೇಂದ್ರೀಯ ಬಸ್ ನಿಲ್ದಾಣದ ಬಳಿ ವಾಹನ ಸವಾರರಿಗೆ 200 ರೂ. ದಂಡ ಹಾಕಿದರು. ಬೈಕ್ ಸವಾರರು ದಂಡ ತಪ್ಪಿಸಿಕೊಳ್ಳಲು ಬೇರೆ ರಸ್ತೆ ಮಾರ್ಗ ಬದಲಾಯಿಸಿದರೆ, ಇನ್ನೂ ಕೆಲವರು ಪೊಲೀಸರನ್ನು ನೋಡಿದ ಕೂಡಲೇ ಕೊರಳಲ್ಲಿ ನೇತು ಹಾಕಿಕೊಂಡಿದ್ದ ಮಾಸ್ಕ್‌ನ್ನು ಮೂಗು, ಬಾಯಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದರು. ಇದೇ ವೇಳೆ ಪೊಲೀಸರು ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಕರೊನಾ ಬಗ್ಗೆ ಅರಿವು ಮತ್ತು ಕಡ್ಡಾಯ ಮಾಸ್ಕ್ ಧರಿಸುವಂತೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net