ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಸಾವು

koppal train accident
Published on

ಕೊಪ್ಪಳ: ತಾಲೂಕಿನ ಗಿಣಿಗೇರಾ ಸಮೀಪ ರೈಲ್ವೆ ಹಳಿ ಪಕ್ಕದಲ್ಲಿ ಬಹಿರ್ದೆಸೆಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬರು ಯಶವಂತಪುರ ವಿಜಯಪುರ ರೈಲಿಗೆ ಸಿಲುಕಿ ಸೋಮವಾರ ಮೃತಪಟ್ಟಿದ್ದಾರೆ.

ಕಲಬುರಗಿ ಮೂಲದ ಕಾರ್ಪೆಂಟರ್ ಭಗವಂತ ಮಹಾದೇವಪ್ಪ ಪತ್ತಾರ (50) ಮೃತ. ಇವರು ಕೊಪ್ಪಳದಲ್ಲಿ ಕೆಲಸ ಮಾಡುತ್ತಿದ್ದರು. ರೈಲ್ವೆ ಹಳಿ ಪಕ್ಕದಲ್ಲಿ ಶೌಚಕ್ಕೆ ಹೋದಾಗ ಸರಕು ಸಾಗಣೆ ರೈಲು ಹಾಗೂ ಯಶವಂತಪುರ-ವಿಜಯಪುರ ರೈಲು ಏಕಕಾಲಕ್ಕೆ ಎದುರಾಗಿವೆ. ಒಂದೇ ರೈಲು ಬರುತ್ತಿದೆ ಎಂದು ಭಾವಿಸಿದ ಭಗವಂತ ರೈಲು ಹಾರ್ನ್ ಹಾಕಿದ್ದನ್ನು ಲೆಕ್ಕಿಸದೆ ಹಳಿ ಮೇಲೆ ಹೋಗಿ, ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net