ಶಾಲೆ ಸ್ವಚ್ಛಗೊಳಿಸಿ ಮಾದರಿಯಾದ ಯುವಕರು

25052020 Koppal youths School groun clean
Published on

ಕೊಪ್ಪಳ: ಲಾಕ್‌ಡೌನ್‌ನಲ್ಲಿ ಹೇಗಪ್ಪ ಸಮಯ ಕಳೆಯುವುದೆಂದು ಯೋಚಿಸುವವರು ಅನೇಕ. ಆದರೆ, ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಯುವಕರು ಸಿಕ್ಕ ಸಮಯ ಸದುಪಯೋಗಪಡಿಸಿಕೊಂಡು ತಾವು ಕಲಿತ ಶಾಲೆ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಶಾಲಾ ಅಂಗಳದಲ್ಲಿ ಬಿದ್ದ ಕಸ ಗೂಡಿಸುವುದು, ಮುಳ್ಳು ಕಂಟಿ ತೆರವುಗೊಳಿಸುವುದು ಮಾಡುತ್ತಿದ್ದಾರೆ. ಮೊದಲ ದಿನ ಹಳೇ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ತೊಡಗಿಕೊಂಡರು. ಇದನ್ನು ಕಂಡು ಗ್ರಾಮದ ಮುಖಂಡರು ಯುವಕರೊಂದಿಗೆ ಕೈ ಜೋಡಿಸಿದ್ದಾರೆ.

ಮುಖಂಡರಾದ ಚನ್ನಪ್ಪ ನಾಗರೆಡ್ಡಿ, ವೀರೇಶ ಸಜ್ಜನ್, ಶರಣಪ್ಪ ಮತ್ತೂರು, ಹನುಮರೆಡ್ಡಿ ಬೆಲ್ಲಡಗಿ ಸೇರಿ ಇತರರು ಯುವಕರಿಗೆ ಸಾಥ್ ನೀಡಿದ್ದಾರೆ. ಶಾಲೆ ಅಷ್ಟೆ ಅಲ್ಲದೆ, ಸರ್ಕಾರಿ ಆಸ್ಪತ್ರೆ ಆವರಣವನ್ನೂ ಸ್ವಚ್ಛಗೊಳಿಸಲು ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ಯುವರು ಮುಂದಾಗಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿ ಇಂಥಹ ಕಾರ್ಯ ನಡೆಯಬೇಕು. ಯುವಕರೆಲ್ಲ ತಮ್ಮ ಊರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಗ್ರಾಮದ ಮುಖಂಡ ಶಿವಪ್ರಸಾದ ಹಾರೋಗೇರೆ ಆಶಯ ವ್ಯಕ್ತಪಡಿಸಿದರು. ಯುವಕರಾದ ಅರವಿಂದ ಬಡಿಗೇರ್, ವೀರೇಶ ಹಿರೇಮಠ, ರಾಜೇಶ ಸಿಂಪಿ ಸೇರಿ 25 ಯುವಕರು ಸ್ವಚ್ಛತಾಕಾರ್ಯದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net