ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳಿ

17 Hanumasagara 1
Published on

ಕೊಪ್ಪಳ: ಯುವಕರು ಶ್ರೀ ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹನುಮಸಾಗರ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು. 

ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಗುರುವಾರ ಆದಿಕವಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚಿಸುವ ಮೂಲಕ ಶ್ರೀರಾಮಚಂದ್ರನನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಜಗತ್ತಿನಲ್ಲಿ ರಾಮಾಯಣ ಮಹಾಕಾವ್ಯ ತನ್ನದೇಯಾದ ಮಹತ್ವ ಪಡೆದುಕೊಂಡಿದೆ. ಯುವಕರು ರಾಮಾಯಣದಲ್ಲಿ ಬರುವ ಪಿತೃವಾಕ್ಯ ಪರಿಪಾಲನೆ, ಸಹೋದರರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದರು.

ಪಿಡಿಒ ದೇವೇಂದ್ರಪ್ಪ ಕಮತರ, ಗ್ರಾಪಂ ಉಪಾಧ್ಯಕ್ಷೆ ಹನುಮವ್ವ ಕಂಗದಲ್ಲ, ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯರಾದ ಬಸವರಾಜ ದ್ಯಾವಣ್ಣನವರ, ಶಿವಪ್ಪ ಕಂಪ್ಲಿ, ಬಸವರಾಜ ಹಕ್ಕಿ, ಮರೇಗೌಡ ಬೋದುರ, ರಿಯಾಜ್ ಖಾಜಿ, ಬಸವರಾಜ ಬಿಲ್ಕಾರ, ಮುಖಂಡರಾದ ನಾಗರಾಜ್ ಕಂದಗಲ್, ಮೌಲಸಾಬ ಮೋಟಗಿ, ಕಳಕಪ್ಪ ನಿರ್ವಾಣಿ, ಮಂಜುನಾಥ ವಾಲ್ಮೀಕಿ, ದ್ಯಾಮಣ್ಣ ತಳವಾರ, ಹನುಮಂತ ಅಕ್ಕಿ ಇತರರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net