ಮಳೆ-ಗಾಳಿಗೆ ನೆಲಕ್ಕುರುಳಿದ ಬೆಳೆ

IMG-20241005-WA0004
Published on

ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಮಳೆ-ಗಾಳಿಗೆ ಅಪಾರ ಬೆಳೆ ನಷ್ಟವಾಗಿದೆ. ಕುಷ್ಟಗಿ ತಾಲೂಕಿನ ಬಚ್ಚಿನಾಳ ಗ್ರಾಮದಲ್ಲಿ ಮೆಣಸಿನ ಕಾಯಿ ಬೆಳೆ ನೆಲಕಚ್ಚಿದರೆ, ಕಲ್ಲಂಗಡಿ‌ ಬೀಜ ನೀರಿನೊಂದಿಗೆ ಕೊಚ್ಚಿ‌ಹೋಗಿದೆ.

ಶುಕ್ರವಾರದಿಂದ ಮಳೆ ಆರ್ಭಟ ಶುರುವಾಗಿದೆ. ಗಾಳಿ ಸಹಿತ ಮಳೆಗೆ ಅಪಾರ ಬೆಳೆ ಹಾಳಾಗಿದೆ. ಕುಷ್ಟಗಿ ತಾಲೂಕಿನ ಬಚ್ಚಿನಾಳ ಗ್ರಾಮದಲ್ಲಿ ಅಪಾರ ಬೆಳೆ ಹಾನಿ ಸಂಭವಿಸಿದೆ. ಮಳೆ ಹೊಡೆತಕ್ಕೆ ಕಲ್ಲಂಗಡಿ ಬೀಜ ಕೊಚ್ಚಿ ಹೋಗಿವೆ. ಮೆಣಸಿನಕಾಯಿ‌ ಗಿಡಗಳು ಮಳೆಗೆ ಕೊಚ್ಚಿ ಹೋಗಿವೆ. ಲಕ್ಷಾಂತರ ರೂ. ಬೆಳೆ ಕಳೆದುಕೊಂಡ ರೈತರು ನಷ್ಟ ಅನುಭಸಿದ್ದಾರೆ.

ರೈತರಾದ ಉಮೇಶ್ ಹಿರೇಮಠ, ಲೋಕಪ್ಪ ಸೋಮನಾಳ, ಹನುಮಪ್ಪ ಎಂಬುವವರು ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. 'ಬೆಳೆ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಮಳೆಯಿಂದ ಬೆಳೆ ಹಾಳಾಗಿದೆ. ದಯವಿಟ್ಟು ನಮಗೆ ಪರಿಹಾರ ಕೊಡಿ' ಎಂದು ಮನವಿ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net