

ಕೊಪ್ಪಳ: ಕೆಪಿಎಸ್ಸಿ ಮೂಲಕ ವಿವಿಧ ಇಲಾಖೆಗಳ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿಗೆ ಜಿಲ್ಲಾದ್ಯಂತ ಮಂಗಳವಾರ ಸೂಸುತ್ರವಾಗಿ ಪರೀಕ್ಷೆ ನಡೆಯಿತು.
ಜಿಲ್ಲಾದ್ಯಂತ 18 ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ಹಮ್ಮಿಕೊಳ್ಳಲಾಯಿತು. ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿಗೆ ಎರಡು ಪತ್ರಿಕೆಗಳು ನಡೆದವು. ಪರೀೆಗೆ ಒಟ್ಟು 5,611 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 2,284 ಅಭ್ಯರ್ಥಿಗಳು ಪರೀೆಗೆ ಹಾಜರಾದರೆ, 3,327 ಜನ ಗೈರಾದರು. ಪರೀಕ್ಷೆ ಆರಂಭಕ್ಕೂ ಮುನ್ನ ಎರಡು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಕೇಂದ್ರಕ್ಕೆ ಆಗಮಿಸಿದರು. ಪರೀಕ್ಷೆ ನಿಯಮಾವಳಿ ಪಾಲಿಸಲು ಕೇಂದ್ರ ಅಧಿಕಾರಿಗಳು ಸೂಚಿಸಿದರು. ಎಲ್ಲ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಯಿತು. ಬೆಳಗ್ಗೆಯೇ ಕೇಂದ್ರದತ್ತ ಧಾವಿಸಿದ ಪರೀಾರ್ಥಿಗಳು ನೋಂದಣಿ ಸಂಖ್ಯೆ ಪರಿಶೀಲಿಸಿಕೊಂಡರು. ವಸ್ತ್ರ ಸಂಹಿತೆ ಅನುಸಾರ ಹಾಜರಾಗಿ ಪರೀೆ ಬರೆದರು.