ಕೇಂದ್ರೀಯ ವಿವಿಯಲ್ಲಿ ಪ್ರವೇಶ ಪಡೆಯಲು ಮಾಜಿ ಸಂಸದ ಶಿವರಾಮಗೌಡ ಸಲಹೆ

Bhagyanagara Examnation Prepation Training
ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಕೋರ್ಸ್‌ಗಳ ಅರ್ಹತಾ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವನ್ನು ಮಾಜಿ ಸಂಸದ ಎಸ್.ಶಿವರಾಮಗೌಡ ಉದ್ಘಾಟಿಸಿದರು.
Published on

ಕೊಪ್ಪಳ: ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಅನ್ಯ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಈ ವಿವಿಯಲ್ಲಿ ಪ್ರವೇಶ ಪಡೆಯಬೇಕೆಂದು ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಜಿಲ್ಲಾ ನಿರ್ದೇಶಕ ಎಸ್.ಶಿವರಾಮಗೌಡ ಹೇಳಿದರು.

ತಾಲೂಕಿನ ಭಾಗ್ಯನಗರದಲ್ಲಿ ಮಂಗಳವಾರ ಸಂಘದಿಂದ ಹಮ್ಮಿಕೊಂಡಿದ್ದ ವಿವಿಧ ಕೋರ್ಸ್‌ಗಳ ಅರ್ಹತಾ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬ ಹಣೆಪಟ್ಟಿ ಹೊತ್ತಿದೆ. ಅದನ್ನು ಹೋಗಲಾಡಿಸಲು ನಮ್ಮ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಸಂಘದಿಂದ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಂಘದ ಆಡಳಿತ ಮಂಡಳಿ ಸದಸ್ಯ ಪ್ರಭುರಾಜ ಎಸ್.ಕಲಬುರ್ಗಿ ಮಾತನಾಡಿ, ಕಲ್ಯಾಣ ಕರ್ನಾಟಕದ ಎಲ್ಲ ಹಳ್ಳಿಗಳ ಮಕ್ಕಳು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓದಬೇಕು ಎಂಬುದು ಮಾಜಿ ಸಂಸದ, ಸಂಘದ ಸಂಸ್ಥಾಪಕ ಬಸವರಾಜ ಪಾಟೀಲ್ ಸೇಡಂ ಆಶಯವಾಗಿದೆ ಎಂದರು.

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ, ಸಂಘದ ಆಡಳಿತ ಮಂಡಳಿ ಸದಸ್ಯ ವಿ.ಎಂ.ಭೂಸನೂರಮಠ, ಆರ್.ಬಿ.ಪಾನಘಂಟಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಗಣಪತಿ ಸಿಂಧನೂರ, ಡಾ.ಲಾಯಕಲಿ, ಡಾ.ಎನ್.ಸಂದೀಪ, ಡಾ.ಎಸ್.ಜಯವೇಲ್, ಡಾ.ಪರಶುರಾಮ ಎಂ.ಕಾಂಬಳೆ, ಡಾ.ಪ್ರವೀಣ ಪೊಲೀಸ್ ಪಾಟೀಲ್, ಸಂಘದ ಜಿಲ್ಲಾ ಸಂಯೋಜಕ ಮಂಜುನಾಥ ಹೊಸ್ಕೇರಾ, ಶೇಖರ ಗಡಾದ, ಮಂಜುನಾಥ ಮಸ್ಕಿ, ರವಿಕುಮಾರ ಕನಕಗಿರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net