ಕಬಡ್ಡಿ ಪಂದ್ಯಾವಳಿಯಲ್ಲಿ ಯಲಬುರ್ಗಾ, ಕೊಪ್ಪಳ ಪ್ರಥಮ

Published on

ಕೊಪ್ಪಳ: ಆರೋಗ್ಯ ಇಲಾಖೆಯಿಂದ ಏಡ್ಸ್​ ತಡೆ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಪುರುಷರ ವಿಭಾಗದಲ್ಲಿ ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ವಿಭಾಗದಲ್ಲಿ ಕೊಪ್ಪಳ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಎ ತಂಡ ಪ್ರಥಮ ಸ್ಥಾನ ಪಡೆದವು.

ಪುರುಷರ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವೀತಿಯ), ಕೊಪ್ಪಳ ಕಿಮ್ಸ್​ ನರ್ಸಿಂಗ್​ ಕಾಲೇಜು (ತೃತೀಯ) ಬಹುಮಾನ ಪಡೆದವು. ಮಹಿಳಾ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಿ ತಂಡ (ದ್ವೀತಿಯ), ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕನಕಗಿರಿ (ತೃತೀಯ) ಸ್ಥಾನ ಪಡೆದವು.

ಪಂದ್ಯದಲ್ಲಿ 13 ಪುರುಷ, 5 ಮಹಿಳಾ ತಂಡ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಕರಾದ ಶರಣಬಸವ ಬಿ., ಬಸವರಾಜ ಎ., ಗದಿಗೆಪ್ಪ, ಲೋಹಿತ್​ಗೌಡ, ಆನಂದ್​, ಶಂಕರ್​, ಬಸವರಾಜ ಎಚ್​., ವಿರೂಪಾಕ್ಷಪ್ಪ, ಶರಣಬಸವಸ್ವಾಮಿ, ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ.ಶಶಿಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net