ಗ್ರಾಮೀಣ ಆರೋಗ್ಯ ಸೇವೆ ಶೋಚನೀಯ, ಬಸವರಾಜ ರಾಯರಡ್ಡಿ ಬೇಸರ

koppal indian red cross wsorkshop basavaraj rayaraddi
ಕೊಪ್ಪಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೆಡ್​ಕ್ರಾಸ್​ ವಿಭಾಗ ಮಟ್ಟದ ಕಾರ್ಯಾಗಾರವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು. ಶಾಸಕ ರಾವೇಂದ್ರ ಹಿಟ್ನಾಳ, ಡಿಸಿ ನಲಿನ್​ ಅತುಲ್​, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ರೆಡ್​ಕ್ರಾಸ್​ ಸಂಸ್ಥೆ ಕೊಪ್ಪಳ ಶಾಖೆ ಸಭಾಪತಿ ಸೋಮರಡ್ಡಿ ಅಳವಂಡಿ ಇದ್ದರು.
Published on

ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುವುದು ಇಂದಿಗೂ ಕಷ್ಟವಿದೆ. ಇದು ಕಳವಳಕಾರಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ನಗರದ ಮಹಾವೀರ ಭವನದಲ್ಲಿ ರೆಡ್​ಕ್ರಾಸ್​ಸಂಸ್ಥೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಲಬುರ್ಗಿ ವಿಭಾಗ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ 1 ಸಾವಿರ ಜನರಿಗೆ ಓರ್ವ ವೈದ್ಯನಿರಬೇಕೆಂದು ಅಭಿಪ್ರಾಪಟ್ಟಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಅಷ್ಟೊಂದು ಸೌಲಭ್ಯಗಳಿಲ್ಲ. ಸರ್ಕಾರಿ ಕಾಲೇಜುಗಳಲ್ಲಿ ವೈದ್ಯ ಪದವಿ ಪಡೆದವರೂ ಸೇವೆ ಸಲ್ಲಿಸಲು ವಿದೇಶಕ್ಕೆ ಹೋಗುತ್ತಾರೆ. ಗ್ರಾಮೀಣ ಸೇವೆ ಕಡ್ಡಾಯಗೊಳಿಸಲು ಸರ್ಕಾರ ಯತ್ನಿಸಿದರೂ ನ್ಯಾಯಾಲಯ ಮೂಲಕ ತಡೆಯಾಜ್ಞೆ ತಂದರು. ಇನ್ನಷ್ಟು ಉತ್ತಮ ಸೇವೆ ದೊರೆಯುವಂತೆ ಮಾಡಬೇಕಿದೆ. ಹಣ ಮಾಡಲು ವಿದೇಶಕ್ಕೆ ಹೋಗುವ ಬದಲು ಹಳ್ಳಿಗಳಲ್ಲಿ ಸೇವೆ ಸಲ್ಲಿಸಲಿ. ರೆಡ್​ಕ್ರಾಸ್​ ಸಂಸ್ಥೆ ಉತ್ತಮ ಸೇವೆ ಮಾಡುತ್ತಿದೆ. ಅಂಗಾಂಗ ಬ್ಯಾಂಕ್​ ಆರಂಭ ಉದ್ದೇಶ ಹೊಂದಿದೆ. ಅದಕ್ಕೆ ಅಗತ್ಯ ನೆರವು ನೀಡಲಾಗುವುದೆಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ರೆಡ್​ಕ್ರಾಸ್​ ಸಂಸ್ಥೆ ಉತ್ತಮ ಸೇವೆ ನೀಡುತ್ತಿದೆ. ರಕ್ತಕ್ಕಾಗಿ ಬೇರೆ ಜಿಲ್ಲೆಗೆ ತೆರಳುವ ಸ್ಥಿತಿ ಇತ್ತ. ಸ್ವಂತ ಕಟ್ಟಡ ನಿರ್ಮಿಸುತ್ತಿದ್ದು, ಸರ್ಕಾರ ನೆರವು ನೀಡಲಿದೆ. ಕಿಮ್ಸ್​ 450 ಹಾಸಿಗೆ ಆಸ್ಪತ್ರೆ ನಿರ್ಮಾಣವಾಗಿದ್ದು ಶ್ರೀವೇ ಲೋಕಾರ್ಪಣೆ ಆಗಲಿದೆ ಎಂದರು.

ರೆಡ್​ಕ್ರಾಸ್​ ಸಂಸ್ಥೆ ರಾಜ್ಯ ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ ಮಾತನಾಡಿ, ನಮ್ಮ ಸಂಸ್ಥೆ 7 ತತ್ವಗಳಡಿ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಲು ವಿಭಾಗ ಮಟ್ಟದ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ 10,871 ರಕ್ತದಾನ ಶಿಬಿರ, 1,19,497 ಯೂನಿಟ್​ ರಕ್ತ ವಿಭಜಕ ನೀಡಲಾಗಿದೆ. 5,479 ಯೂನಿಟ್​ ರಕ್ತ ಪೂರೈಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವಿಶ್ವಶಾಂತಿ ದಿನಾಚರಣೆ ಅಂಗವಾಗಿ ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು.

ಡಿಸಿ ನಲಿನ್​ ಅತುಲ್​, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ರೆಡ್​ಕ್ರಾಸ್​ ಸಂಸ್ಥೆ ಕೊಪ್ಪಳ ಶಾಖೆ ಸಭಾಪತಿ ಸೋಮರಡ್ಡಿ ಅಳವಂಡಿ, ಡಾ.ಪ್ರಕಾಶ, ಡಾ.ಗವಿ ಪಾಟೀಲ್​, ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷದ ನಾಗರಾಜ ಜುಮ್ಮನವರ, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಬಾಲಸುಬ್ರಹ್ಮಣ್ಯಂ, ಎಂ.ಎಸ್​.ಶರತ್​, ಉಪಸಭಾಪತಿ ಡಾ.ಗವಿಸಿದ್ದನಗೌಡ, ಡಾ.ಸಿಎಸ್​.ಕರಮುಡಿ, ರಾಜೇಶ ಯಾವಗಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net