

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅ.3ರಿಂದ 12ವರೆಗೆ ದಸರಾ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಅ.3ರ ಸಂಜೆ 6ಗಂಟೆ ಟಸ್ಥಾಪನೆ ಆಗಲಿದೆ. ದೇವಸ್ಥಾನದ ಸಿಬ್ಬಂದಿಯಿಂದ ಮಂಗಳವಾದ್ಯ ಹಾಗೂ ಮೀರಾ ಹಾಗೂ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿವೆ. ಅ.4 ಮತ್ತು 5ರಂದು ರ ಸಂಜೆ 6.30ಕ್ಕೆ ಭರತನಾಟ್ಯ, ಯೋಗ, ಅ.7ರಂದು ಬೆಳ್ಳಿ ಮಂಟಪದಲ್ಲಿ ದೇವಿಗೆ ಶಾರ್ದೂಲ ವಾಹನ ಪೂಜೆ ನಡೆಯಲಿದೆ. ಅ.8ರಂದು ಸಿಂಹ ವಾಹನ ಪೂಜೆ ನಡೆಯಲಿದೆ. 9ರಂದು ಮಯೂರ ವಾಹನ ಪೂಜೆ ನಡೆಯಲಿದೆ. 10ರಂದು ಸರಸ್ವತಿ ಪೂಜೆ, ದುರ್ಗಾಷ್ಠಮಿ ಬೆಳ್ಳಿ ಮಂಟಪದಲ್ಲಿ ಅಶ್ವ ವಾಹನ ಪೂಜೆ, 11ರಂದು ಮಹಾನವಮಿ, ಆಯುಧ ಪೂಜೆ ಬೆಳ್ಳಿ ಮಂಟಪದಲ್ಲಿ ದೇವಿಗೆ ಗಜವಾಹನ ಪೂಜೆ ನಡೆಯಲಿದೆ.
ಅ.12ರ ವಿಜಯದಶಮಿಯಂದು ಮಧ್ಯಾಹ್ನ 3 ಗಂಟೆಗೆ ದೇವಿಗೆ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷ ಪೂಜೆ, ದೇವಸ್ಥಾನದಲ್ಲಿ ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪದೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳುತ್ತವೆ. ಅ7ರಿಂದ 9ವರೆಗೆ ಹುಲಿಗಿ ಹಳೇ ತುಂಗಭದ್ರಾ ಪ್ರೌಢಶಾಲೆಯಲ್ಲಿ ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿವೆ ಎಂದು ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಂ.ಎಚ್.ಪ್ರಕಾಶ್ರಾವ್ ತಿಳಿಸಿದ್ದಾರೆ.