ಹುಲಿಗಿಯಲ್ಲಿ ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

koppal huligi village huligemma devi temple dassera utsava
Published on

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯದಲ್ಲಿ ದಸರಾ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಶನಿವಾರ ಭರತನಾಟ್ಯ ಹಾಗೂ ಇತರ ಸಾಂಸ್ಕೃತಿಕ ನೃತ್ಯ ಗಮನ ಸೆಳೆದವು.

ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಅರ್ಚನೆ, ಅಲಂಕಾರ ಮಂತ್ರಪಠಣ ನಡೆದವು. ಹುಲಿಗಿಯ ನಾಟ್ಯನಾದ ಕಲಾ ಕೇಂದ್ರದ ಶಾಲಿನಿ ಹೆಬ್ಬಾರ ಭರತನಾಟ್ಯ, ತೆಗ್ಗಿಹಾಳದ ಶಿವರಾಯಪ್ಪ ಅವರಿಂದ ಚೌಡ್ಕಿ ಪದಗಳು ಭಕ್ತರ ಮನಸೋರೆಗೊಂಡವು. ಭಾಗ್ಯನಗರದ ಸುಗಮ ಸಂಗೀತ ಕಲಾವಿದೆ ಶಕುಂತಲಾ ಬಿನ್ನಾಳ ಹಾಗೂ ಹುಲಿಗಿಯ ಶೃತಿ ಹ್ಯಾಟಿ ಅವರ ಸಂಗೀತ ಕಾರ್ಯಕ್ರಮ ನೋಡುಗರನ್ನು ತಲೆದೂಗುವಂತೆ ಮಾಡಿತು. ಹುಲಿಗಿ ಗ್ರಾಮದ ಶಾಲಾ ಮಕ್ಕಳ ನೃತ್ಯ ಪ್ರದರ್ಶನ ಮನರಂಜನೆ ನೀಡಿತು. ಭಾನುವಾರ ಜಾನಪದ ಕಲೆಗಳ ಪ್ರದರ್ಶನ ಇರಲಿದೆ. ದೇವಿಗೆ ಶಾರ್ದೂಲ ವಾಹನ ಪೂಜೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net