ಹುಲಿಗಿ ಬಳಿ ಹರಿಯುವ ತುಂಗಭದ್ರೆಗೆ ಬಾಗಿನ ಅರ್ಪಣೆ: ಹುಲಿಗೆಮ್ಮ ದೇವಸ್ಥಾನ ಆಡಳಿತ ಮಂಡಳಿಯಿಂದ ಪೂಜೆ

17072022 koppal huligi bagina
Published on

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಬಳಿ ಹುಲಿಗೆಮ್ಮ ದೇವಿ ದೇವಾಲಯ ಆಡಳಿತ ಮಂಡಳಿಯಿಂದ ತುಂಗಭದ್ರಾ ನದಿಗೆ ಭಾನುವಾರ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.

ಮುನಿರಾಬಾದ್ ತುಂಗಭದ್ರಾ ಜಲಾಶಯ ಮೈದುಂಬಿದ್ದು, ಒಳ ಹರಿವು ಹೆಚ್ಚಿರುವ ಕಾರಣ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ನದಿಗೆ ಹೊಂದಿಕೊಂಡು ಹುಲಿಗೆಮ್ಮ ದೇವಿ ದೇವಾಲಯವಿದೆ. ನದಿ ನೀರು ಹುಲಿಗೆಮ್ಮ ದೇವಿ ಪಾದಗಟ್ಟೆವರೆಗೆ ತಲುಪಿದೆ. ಜಲಾಶಯ, ನದಿ ಎರಡೂ ಮೈದುಂಬಿದ್ದು, ಎಲ್ಲರಲ್ಲೂ ಹರ್ಷ ಮೂಡಿಸಿದೆ. ಹೀಗಾಗಿ ದೇವಾಲಯ ಆಡಳಿತ ಮಂಡಳಿಯಿಂದ ಭಾನುವಾರ ತುಂಗಭದ್ರೆಗೆ ಉಡಿ ತುಂಬುವ ಮೂಲಕ ಬಾಗಿನ ಅರ್ಪಿಸಲಾಯಿತು. ದೇವಸ್ಥಾನದ ಇಒ ಅರವಿಂದ ಸುತಗೊಂಡಿ ಕುಟುಂಬ ಸದಸ್ಯರು ಹಾಗೂ ಸಿಬ್ಬಂದಿಯೊಂದಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು ಸೇರಿ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net