ಹಾಸ್ಟೆಲ್​ ವಿಭಾಗಿಸಿ ಸೌಲಭ್ಯ ಕಲ್ಪಿಸಿ

koppal hostel students memorandum zp ceo rahul ratnam pandey
Published on

ಕೊಪ್ಪಳ: ನಗರದ ಪರಿಶಿಷ್ಟ ಪಂಗಡ ಮೆಟ್ರಿಕ್​ ನಂತರದ ಬಾಲಕಿಯರ ಹಾಸ್ಟೆಲ್​ ವಿಭಾಗಿಸಿ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ವಿದ್ಯಾರ್ಥಿನಿಯರು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯಗೆ ಮನವಿ ಸಲ್ಲಿಸಿದರು.

ಕಟ್ಟಡದಲ್ಲಿ 100 ವಿದ್ಯಾರ್ಥಿಗಳಿರಬೇಕು. ಆದರೆ, 375 ಜನ ಇದ್ದೇವೆ. ಮಲಗಲು ಸರಿಯಾಗಿ ಜಾಗ ಇಲ್ಲದಂತಾಗಿದೆ. ಸ್ನಾನ, ಬಟ್ಟೆ ತೊಳೆಯಲು ಸಮಸ್ಯೆ ಆಗುತ್ತಿದೆ. ಆಹಾರ ಗುಣಮಟ್ಟದಿಂದ ಕೂಡಿಲ್ಲ. ಈ ಬಗ್ಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನ್ಯಾಯಾಧೀಶರು, ಮೇಲಧಿಕಾರಿಗಳು ಭೇಟಿ ನೀಡಿ ಸುಧಾರಣೆಗೆ ಸೂಚಿಸಿದ್ದಾರೆ. ಆದರೂ ಪಾಲಿಸುತ್ತಿಲ್ಲವೆಂದು ಅಳಲು ತೋಡಿಕೊಂಡರು.

ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದು ಹಾಸ್ಟೆಲ್​ ವಿಭಾಗಿಸಬೇಕು. ಬಿಸಿ ನೀರು ನೀಡಿ. ಸಿಸಿಟಿವಿ ಕ್ಯಾಮರಾ ಅಳವಡಿಸಿ. ಗ್ರಂಥಾಲಯ ಆರಂಭಿಸಿ ಪುಸ್ತಕ ನೀಡಿ. ಹಾಸ್ಟೆಲ್​ ಸಮಸ್ಯೆ ನಿವಾರಣೆಗೆ ವಿದ್ಯಾರ್ಥಿ ಸಂಟನೆ ಮುಖಂಡರನ್ನೊಳಗೊಂಡು ಸಮಿತಿ ರಚಿಸಿ ಸಭೆ ನಡೆಸುವಂತೆ ಆಗ್ರಹಿಸಿದರು.

ಎಸ್​ಎ್​ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ, ರಾಜ್ಯ ಸಮಿತಿ ಸದಸ್ಯ ಶಿವಕುಮಾರ, ಜಿಲ್ಲಾ ಮುಖಂಡ ಬಾಲಾಜಿ, ಅಂಬ್ರಯ್ಯ ಹಿರೇಮಠ, ಅಮರೇಶ ಲಿಂಗದಳ್ಳಿ, ವಿದ್ಯಾರ್ಥಿನಿಯರಾದ ಪೂಜಾ, ಲಲಿತಾ, ಶರಣಮ್ಮ, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net