ಜನರ ಮೇಲೆ ಹಿಂದಿ ಹೇರಿಕೆ ಸರಿಯಲ್ಲ

14092022 kpl jds manavi
Published on

ಕೊಪ್ಪಳ: ಹಿಂದಿ ದಿವಸ್ ಆಚರಣೆ ಖಂಡಿಸಿ ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳು ಬುಧವಾರ ಡಿಸಿ ಎಂ.ಸುಂದರೇಶ ಬಾಬು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಕುತಂತ್ರದಿಂದ ಬಲವಂತವಾಗಿ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ. 400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆ ದಿನಾಚರಣೆ ಮಾಡುತ್ತಿದ್ದು, ಇದರಿಂದ 2500 ವರ್ಷಗಳ ಹಿತಿಹಾಸ ಹೊಂದಿರುವ ಕನ್ನಡ ಭಾಷೆಗೆ ಅಪಮಾನ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಕನ್ನಡವಷ್ಟೇ ಅಲ್ಲದೆ ಕೊಂಕಣಿ, ತುಳು, ಕೊಡುವ ಸೇರಿ ಹತ್ತಾರು ಭಾಷೆಗಳಿವೆ. ವೈವಿಧ್ಯಮಯ ಸಂಸ್ಕೃತಿ ಇದೆ. ಹೀಗಿರುವಾಗ ಸಂಬಂಧವಿಲ್ಲದ ಭಾಷೆ ಆಚರಣೆ ಮಾಡುವುದು ಸರಿಯಲ್ಲ. ಇದು ಕನ್ನಡಿಗರಿಗೆ ಮಾಡುವ ಅವಮಾನವೆಂದು ಖಂಡಿಸಿದರು.

ಹಿಂದಿ ದಿವಸ ಆ ಭಾಷಿಕ ರಾಜ್ಯಗಳಿಗೆ ಸೀಮಿತವಾಗಲಿ. ನಮಗೆ ಅವಶ್ಯಕತೆ ಇಲ್ಲ. ಹೊರಗಿನವರ ದಾಳಿಯ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ. ಈಗಲೂ ಉಗ್ರವಾಗಿ ವಿರೋಧಿಸುತ್ತೇವೆ. ಹಿಂದಿ ದಿವಸ್ ಆಚರಣೆಯಲ್ಲಿ ಕನ್ನಡಿಗರು ಭಾಗಿಯಾಗಬಾರದು. ಯಾವುದೇ ಬೆಂಬಲ ನೀಡಬಾರದು. ರಾಜ್ಯ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಗೌರವ, ಅಭಿಮಾನ ಇದ್ದರೆ ಕೂಡಲೇ ಹಿಂದಿ ದಿವಸ ಆಚರಣೆ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸೊರಟೂರು, ಜಿಲ್ಲಾ ಕಾರ್ಯಾಧ್ಯಕ್ಷ ವಿ.ಪಿ.ಬುಲೆಟ್‌ಗೌಡರ್, ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಚಿಗರಿ, ಚನ್ನಬಸಪ್ಪ ಮುತ್ತಾಳ, ಮುಖಂಡರಾದ ಸುರೇಶಗೌಡ ಪಾಟೀಲ್, ಮೈಲಾರಪ್ಪ ಹೊಸಮನಿ ಹಲವಾಗಲಿ, ಕನಕರಾಯ ಹೊಸಕೇರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net