ನೆರವಾಗುವುದೇ ನಿಜವಾದ ಮನುಷ್ಯತ್ವ - ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಶಿಂತ್ರೆ ಅಭಿಪ್ರಾಯ

Koppal Mahila Dinacharani
ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಕಾಶ ಪಟೇಲ್ ಮಹಿಳೆಯರಿಗೆ ಸೀರೆ ವಿತರಿಸಿದರು.
Published on

ಕೊಪ್ಪಳ: ಸಮಾಜದಲ್ಲಿ ನಿಕೃಷ್ಟ ಸ್ಥಿತಿಯಲ್ಲಿರುವ ಜನರನ್ನು ಮೇಲೆತ್ತುವುದೇ ನಿಜವಾದ ಆಚರಣೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಶಿಂತ್ರೆ ಅಭಿಪ್ರಾಯಪಟ್ಟರು.

ನಗರದ ಸಜ್ಜಿಹೊಲ ಪ್ರದೇಶದಲ್ಲಿ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ದೇಶಿಸಿ ಮಾತನಾಡಿದರು. ಹರಿಣಿ ಶಿಕಾರಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ವರ್ಷದ ಮಹಿಳಾ ದಿನಾಚರಣೆಯನ್ನು ಸಾಧನೆಯೊಂದಿಗೆ ಸಂಭ್ರಮದಿಂದ ಇದೇ ಸ್ಥಳದಲ್ಲಿ ಆಚರಿಸೋಣ ಎಂದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಗೊಂಡಬಾಳ ಮಾತನಾಡಿ, ಮಹಿಳೆಗೆ ಸ್ವಾಸ್ಥ್ಯ ಜೀವನ ನಡೆಸಲು ಅನುಕೂಲ ಮಾಡುವುದರೊಂದಿಗೆ ಶೋಷಿತ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು ಎಂದರು. ಉದ್ಯಮಿ ಪ್ರಕಾಶ ಪಟೇಲ್ ಮಹಿಳೆಯರಿಗೆ ಸೀರೆ ವಿತರಿಸಿದರು., ವಾಡ್ ಸದಸ್ಯೆ ಯಲ್ಲಮ್ಮ ಗಿಣಗೇರಿ, ಸಮಿತಿಯ ಕಾರ್ಯದರ್ಶಿ ವಿಜಯಲಕ್ಷ್ಮೀ ಗುಳೇದ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಶಶಿಧರ್, ಮುಖಂಡ ಮಂಜುನಾಥ ಗೊಂಡಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net