ಕೊಪ್ಪಳ: ನಗರದ ಎಸ್ಪಿ ಕಚೇರಿ ಕಾನಿಸ್ಟೇಬಲ್ ಮೇಲಧಿಕಾರಿಗಳ ಕಣ್ತಪ್ಪಿಸಿ ವಿವಿಧ ಮೊಬೈಲ್ ನಂಬರ್ಗಳ ಸಿಡಿಆರ್ ಮತ್ತು ಟವರ್ ಲೊಕೇಷನ್ ಮಾಹಿತಿ ಸೋರಿಕೆ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅಪರಾಧ ಠಾಣೆ ವಿಭಾಗದ ಸಿಎಚ್ಸಿ ಕೋಟೆಪ್ಪ ಕೃತ್ಯ ಎಸಗಿದಾತ. 145 ಮೋಬೈಲ್ ಸಿಡಿಆರ್, 9 ಟವರ್ ಡಂಪ್ ಮಾಹಿತಿಯನ್ನು ಅಕ್ರಮವಾಗಿ ನೀಡಿದ್ದಾನೆ. ಈ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಅಕ್ರಮವಾಗಿ ರವಾನಿಸುವುದು ದೃಢಪಟ್ಟಿದೆ. ಈ ರೀತಿ ಮಾಹಿತಿ ಹಂಚಿಕೊಳ್ಳು ಪ್ರಕರಣ ದಾಖಲಾಗಿರುವುದು, ಅಥವಾ ಮೇಲಧಿಕಾರಿ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಈ ಸಂಬಂಧ ಸೆನ್ ಠಾಣೆಯಲ್ಲಿ ಆ.21ರಂದು ಪ್ರಕರಣ ದಾಖಲಾಗಿದೆ. ಪ್ರರಕಣ ದಾಖಲಾಗುತ್ತಲೇ ಆರೋಪಿ ನಾಪತ್ತೆಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.