ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ನೆನೆಯೋಣ; ಸಚಿವ ಹಾಲಪ್ಪ ಆಚಾರ್ ಹೇಳಿಕೆ

15082021 Koppal Minister Halappa Achar National Flag
Published on

ಕೊಪ್ಪಳ: ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರೃ ದೊರೆತಿದೆ. ಪ್ರಾಮಾಣಿಕ ಮಾರ್ಗದಲ್ಲಿ ಅಭಿವೃದ್ಧಿಯತ್ತ ಸಾಗುವ ಮೂಲಕ ಸ್ವಾತಂತ್ರೃ ಹೋರಾಟಗಾರರಿಗೆ ವಂದನೆ ಸಲ್ಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸ್ವಾತಂತ್ರೃ ದಿನ ಆಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಿಲ್ಲೆಯ ಮುಂಡರಗಿ ಭೀಮರಾಯ, ಶಿರೂರು ವೀರಭದ್ರಪ್ಪ, ಹಮ್ಮಿಗಿ ಕೆಂಚನಗೌಡ, ಶಿವಮೂರ್ತಿಸ್ವಾಮಿ ಅಳವಂಡಿ ಸೇರಿದಂತೆ ಹಲವರು ಸ್ವಾತಂತ್ರೃ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತ ಗಳಿಗೆ ಸಂದರ್ಭದಲ್ಲಿ ನಾಡು, ನುಡಿಗಾಗಿ ಹೋರಾಡಿದ ಎಲ್ಲರನ್ನೂ ನೆನೆಯೋಣ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಅಭಿವೃದ್ಧಿ ಸವಾಲು ಎದುರಾಗಿದೆ. ತೋಟಗಾರಿಕೆ ಟೆಕ್ ಪಾರ್ಕ್, ವಿಶ್ವ ಮಟ್ಟದ ಆಟಿಕೆ ಕ್ಲಸ್ಟರ್ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ಹೋರಾಟಗರಾರರು ಹಾಗೂ ಹೋರಾಟದ ೆಟೋಗಳು, ಜಿಲ್ಲೆಯ ಇತಿಹಾಸ ಬಿಂಬಿಸುವ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net