

ಕೊಪ್ಪಳ: ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಯೋಜನೆಗಳ ಯಶೋಗಾಥೆ ಬಗ್ಗೆ ಜನರಿಗೆ ತಿಳಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ತಿಳಿಸಿದರು.
ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅಧಿಕಾರಿಗಳ ಮುತುವರ್ಜಿ ವಹಿಸಿ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೀರಿ. ಅದರಂತೆ ಯೋಜನೆಗಳ ಯಶೋಗಾಥೆ ಬಗ್ಗೆ ತಿಳಿಸುವ ಕೆಲಸವಾಗಲಿ. ಗೃಹ ಲಕ್ಷಿ$್ಮ ಮಹತ್ವಕಾಂ ಯೋಜನೆಯಾಗಿದ್ದು, ಪ್ರತಿ ತಿಂಗಳು ಅರ್ಹರಿಗೆ 2 ಸಾವಿರ ರೂ. ತಲುಪಿಸಿ ಎಂದು ಸಲಹೆ ನೀಡಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮತನಾಡಿ, ಯೋಜನೆಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ. ಅಗತ್ಯ ಇರುವೆಡೆ ಮಾಹಿತಿ ಲಕ ಅಳವಡಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 3,31,365 ಪಡಿತರ ಚೀಟಿ ಇವೆ. ಪಜಾ 56,145, ಪಪಂನ 35,479 ಹಾಗೂ ಇತರ -2,28,526 ಸೇರಿ 3,20,150 ಫಲಾನುಭವಿಗಳು ಗೃಹಲಕ್ಷಿ$್ಮ ಯೋಜನೆಯಡಿ ನೋಂದಣಿ ಆಗಿದ್ದಾರೆ. ಜೂನ್ ಅಂತ್ಯಕ್ಕೆ 3,11,144 ಫಲಾನುಭವಿಗಳಿಗೆ 640 ಕೋಟಿ ರೂ. ಭರಿಸಲಾಗಿದೆ. 3,27,118 ಪಡಿತರ ಚೀಟಿಗಳಿದ್ದು 11,78,018 ಸದಸ್ಯರಿಗೆ 209.71 ಕೋಟಿ ರೂಪಾಯಿ ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಆ.24ವರೆಗೆ 57.44 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ.
ಗೃಹ ಜ್ಯೋತಿಯಲ್ಲಿ 2,72,610 ಅರ್ಹ ಗ್ರಾಹಕರು ನೋಂದಣಿಯಾಗಿದ್ದು ಲಾಭ ಪಡೆಯುತ್ತಿದ್ದಾರೆ. ಯುವನಿಧಿ ಯೋಜನೆಯಡಿ 4,920 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು ಆಗಸ್ಟ್ ಅಂತ್ಯಕ್ಕೆ 3,819 ಫಲಾನುಭವಿಗಳಿಗೆ 1,14,22,500 ರೂ.ಗಳ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷಕರು, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇದ್ದರು.