ದ್ರಾಕ್ಷಿ ಬೆಳೆಗಾರರಿಗೆ ಸಲಹೆ

Published on

ಕೊಪ್ಪಳ: ಸತತ ಮಳೆ, ಮೊಡ ಕವಿದ ವಾತಾವರಣ ಕಾರಣ ದ್ರಾಕ್ಷಿ ಬೆಳೆಯಲ್ಲಿ ವಿವಿಧ ರೋಗಗಳು ಕಾಣಿಸಿಕೊಂಡಿವೆ. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ವಿವಿಧ ತೋಟಗಳಿಗೆ ಭೇಟಿ ನಿಡಿ ರೋಗ ನಿಯಂತ್ರಣಕ್ಕೆ ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ದ್ರಾಯಲ್ಲಿ ಬೂಜುತುಪ್ಪಟ, ಚಿಬ್ಬು, ಕಾಳುಕೊಳೆ ರೋಗ ಕಾಣಿಸಿಕೊಂಡಿದೆ. ಈಗಾಗಲೇ ಚಾಟಣಿ ಮಾಡಿದ ತೋಟಗಳಲ್ಲಿ ಈ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಇದರಿಂದ ಇಳುವರಿ ಮೇಲೆ ದುಷ್ಪರಿಣಾಮ ಆಗಲಿದೆ. ಅಕ್ಟೋಬರ್​ನಲ್ಲಿ ಚಾಟಣಿ ಮಾಡಬೇಕು. ರೋಗಗ್ರಸ್ತ ಬಳ್ಳಿ ಭಾಗ, ಎಲೆ ಕತ್ತರಿಸಿ ನಾಶ ಮಾಡಿ. ಚಿಗುರು ತೆಗೆಯುತ್ತಿರಬೇಕು. ಚಾಟಣಿ ಮಾಡಿದ 2 ದಿನಗಳೊಳಗೆ ಶೇ.1ರಷ್ಟು, ಚಾಟಣಿ ಮಾಡದೇ ಉಳಿದಿರುವ ಬಳ್ಳಿಗಲಿಗೆ ಶೇ.0.5 ಬೋರ್ಡೊ ದ್ರಾವಣ ಸಿಂಪಡಿಸಬೇಕು.

ಕರಪಾ, ಚಿಬ್ಬು ರೋಗ ಹತೋಟಿಗೆ ಥೈಯೋಫಿನೈಟ್​ ಮಿಥೈಲ್​ 2 ಗ್ರಾಂ.ಕಾರ್ಬನ್​ಡೈಜಿಮ್​1 ಗ್ರಾಂ. ಶಿಲಿಂಧ್ರನಾಶಕ ಸಿಂಪಡಿಸಬೇಕು. ಬೂಜುತುಪ್ಪಟ ರೋಗಕ್ಕೆ ಫಾಸ್ಟೀಲ್​ ಅಲೂಮಿನಿಯಂ 2 ಗ್ರಾಂ. 1 ಲೀಟರ್​ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಂಯುಕ್ತ ಶಿಲೀಂದ್ರ ನಾಶಕಗಳಾದ ಮೆಲೋಡಿಡ್ಯುಯೋ 3 ಗ್ರಾಂ. ಅಥವಾ ರಿಡೊಮೀಲ್​ಗೋಲ್ಡ್​ 2.5 ಗ್ರಾಂ. 1 ಲೀಟರ್​ ನೀರಿಗೆ ಬೆರೆಸಿ ಸಿಂಪಡಿಸಬೇಕು. ಡಾರ್ಮೆಕ್ಸ್​ ಲೇಪಿಸುವಾಗ 1 ಲೀಟರ ದ್ರಾವಣಕ್ಕೆ 6 ಗ್ರಾಂ. ಮ್ಯಾಂಕೋಜೆಬ್​ ಶಿಲೀಂಧ್ರ ನಾಶಕ ಬೆರೆಸಿ ಲೇಪಿಸಬೇಕು.

ಚಾಟಣಿ ಮಾಡಿದ 25-&30ದಿನಗಳ ಅಂತರದಲ್ಲಿ ಜಿ.ಎ. ಬಳಸುವಾಗ 1 ಲೀಟರ್​ ದ್ರಾವಣದಲ್ಲಿ 3 ಗ್ರಾಂ. ಅಲಿಯಟ್​ ಬೆರೆಸಿ ಸಿಂಪಡಿಸಬೇಕು. ಆಲ್ಟರ್ನೆರಿಯಾ ಮತ್ತು ಇತರೆ ಶಿಲೀಂಧ್ರಗಳಿಂದ ಹರಡುವ ಕೊಳೆ ರೋಗಕ್ಕೆ ಡೈಫೆನ್​ಕೊನೋಜೊಲ್​ 0.5 ಮಿಲೀ. ಪ್ರಮಾಣದಲ್ಲಿ ಸಿಂಪಡಿಸಬೇಕು. 15 ದಿನಗಳ ಅಂತರದಲ್ಲಿ ದ್ರವರೂಪದ ಟೆಕೊಡಮಾರ್ ಜೈವಿಕ ಶಿಲೀಂಧ್ರ ನಾಶಕ ಸಿಂಪಡಿಸಬೇಕು. ತೇವಾಂಶ ಹೆಚ್ಚಾದಾಗ ಬ್ಲೋವರ್​ನಿಂದ ಗಾಳಿ ಬೀಸುತ್ತಾ ತೇವಾಂಶ ಹೋಗಲಾಡಿಸಬೇಕೆಂದು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net