ಗಿಣಿಗೇರಿ ಕೆರೆ ಬಳಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ

03052021 Koppal Ginigera Lake planting work
Published on

ಕೊಪ್ಪಳ: ತಾಲೂಕಿನ ಗಿಣಿಗೇರಿ ಕೆರೆಗೆ ಬಂಡ್ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ಸೋಮವಾರ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಅಭಿನವ ಗವಿಶ್ರೀಗಳ ಸಂಕಲ್ಪದಂತೆ ಕೆರೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. 248 ಎಕರೆ ವಿಸ್ತೀರ್ಣದ ಕೆರೆ ಸುತ್ತ 50 ಅಡಿ ಅಗಲದ ಬಂಡ್ ಹಾಗೂ ರಸ್ತೆ ನಿರ್ಮಿಸಲಾಗಿದೆ. ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಬಂಡ್ ಎರಡೂ ಬದಿ ಗಿಡಗಳನ್ನು ನೆಡಲಾಗುತ್ತಿದೆ. ಒಟ್ಟು 15 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.

ಸೋಮವಾರ ಕೆರೆಗೆ ಭೇಟಿ ನೀಡಿದ್ದ ಗವಿಶ್ರೀಗಳು ಕಾಮಗಾರಿ ಪರಿಶೀಲಿಸಿದರು. ಮುಂದಿನ ಕೆಲಸಗಳ ಬಗ್ಗೆ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರೊಡನೆ ಚರ್ಚಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಕೆ.ಎಂ.ನಾಗರಾಜ್, ಅಂದಪ್ಪ ಕುರಿ, ಹೊನ್ನೂರಸಾಬ್, ಸನ್ಮತಿ ಕುಮಾರ್, ಲಿಂಗರಾಜ, ರಾಜಾಸಾಬ್, ತೋಟಗಾರಿಕೆ ಇಲಾಖೆಯ ಶಿವಪುತ್ರಪ್ಪ, ಕೆ.ಎಚ್.ಪಾಟೀಲ್, ಮುಖಂಡರಾದ ಸುಬ್ಬಣ್ಣಾಚಾರ್ಯ ವಿದ್ಯಾನಗರ, ಕರಿಯಪ್ಪ ಮೇಟಿ, ಭೋಜಪ್ಪ ಕುಂಬಾರ, ಬಿ.ಎಸ್. ಸುರೇಶ, ಕುಬೇರ ಮಜ್ಜಿಗಿ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net