ಕ್ರೀಡೆಯಿಂದ ಆರೋಗ್ಯ ಸುಧಾರಣೆ

koppal gavisiddewara bams college
ಕೊಪ್ಪಳದ ಗವಿಸಿದ್ದೇಶ್ವರ ಆಯುರ್ವೇದ ಮಹವಿದ್ಯಾಲಯದಲ್ಲಿ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.
Published on

ಕೊಪ್ಪಳ: ಆಟದಲ್ಲಿ ಸೋಲು ಗೆಲುವು ಸಹಜ ಆದರೆ ಕ್ರೀಡೆಯಲ್ಲಿ ಭಾಗವಹಿಸಿದ ಸಂತೋಫಿ ನಮಗಿರಬೇಕು ಎಂದು ಗವಿಸಿದ್ದೇಶ್ವರ ಟ್ರಸ್ಟ್​ ನ ಸಂಜಯ ಕೊತಬಾಳ ಅಭಿಪ್ರಾಯಪಟ್ಟರು.

ನಗರದ ಗವಿಸಿದ್ದೇಶ್ವರ ಆಯುರ್ವೇದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಲ್ಬುರ್ಗಿ ವಿಭಾಗ ಮಟ್ಟದ ಪುರುಫಿ ಮತ್ತು ಮಹಿಳಾ ಫಿಟಲ್​ ಬ್ಯಾಡ್ಮಿಂಟನ್​ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ಮಹಾವಿದ್ಯಾಲಯ ಕ್ರೀಡಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ. ನೀವು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಅಧ್ಯಯನದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಡಗೊಳಿಸುತ್ತವೆ. ರಾಜೀವ್​ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕೇವಲ ವೈದ್ಯಕಿಯ ಚಟುವಟಿಕೆಗಳಲ್ಲದೇ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಬಹಳ ಸಂತೋಫಿ ತಂದಿದೆ ಎಂದರು.

ಪ್ರಾಚಾರ್ಯ ಡಾ.ಎಂ.ಎಂ.ಸಾಲಿಮಠ, ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರ್ಗಿ ವಿಭಾಗದ ನಿಯೋಜಿತ ಸಂಯೋಜಕ ಹನುಮಂತ ಪವಾರ ಮಾತನಾಡಿದರು.

ಪುರುಫಿರ ವಿಭಾಗದಲ್ಲಿ - ನವೋದಯ ಮೆಡಿಕಲ್​ ಕಾಲೇಜ್​ ರಾಯಚೂರು ಪ್ರಥಮಸ್ಥಾನ, ಶ್ರೀ ನಿಜಲಿಂಗಪ್ಪ ಮೆಡಿಕಲ್​ ಕಾಲೇಜು ಬಾಗಲಕೋಟೆ ದ್ವೀತಿಯ, ಕೊಪ್ಪಳ ವೈದ್ಯಕಿಯ ಮಹಾವಿದ್ಯಾಲಯ ತೃತೀಯ, ಅಲ್​ ಅಮಿನ್​ ಮೆಡಿಕಲ್​ ಕಾಲೇಜ್​ ವಿಜಯಪುರ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಮಹಿಳೆಯರ ವಿಭಾಗದಲ್ಲಿ -ಶ್ರೀ ನಿಜಲಿಂಗಪ್ಪ ವೈದ್ಯಕಿಯ ಮಹಾವಿದ್ಯಾಲಯ ಬಾಗಲಕೋಟೆ ಪ್ರಥಮ, ಕೊಪ್ಪಳ ವೈದಕೀಯ ಮಹಾವಿದ್ಯಾಲಯ ದ್ವಿತಿಯ, ಶ್ರೀ ವಿಜಯಾಮಹಾಂತೇಶ್​ ಆಯುರ್ವೇದ ಮಹಾವಿದ್ಯಾಲಯ ಇಳಕಲ್​ ತೃತೀಯ, ಶ್ರೀಮತಿ ಶಾಂತಾದೇವಿ ಆಯುರ್ವೇದ ಮಹಾವಿದ್ಯಾಲಯ ಬಾಗಲಕೋಟೆ ನಾಲ್ಕನೇ ಸ್ಥಾನ ಪಡೆದುಕೊಂಡಿವೆ.

21 ಪುರುಫಿರ ಹಾಗೂ 9 ಮಹಿಳಾ ತಂಡಗಳು ಭಾಗವಹಿಸಿದ್ದವು. ಕ್ರೀಡಾ ತರಬೇತುದಾರರಾದ ಡಾ.ಜಗದೀಶ್​, ಡಾ.ವಿಜಯಕುಮಾರ್​ ಹಿರೇಮಠ್​, ಚಂದ್ರಕಾಂತ್​, ಈಶಪ್ಪ ದೊಡ್ಡಮನಿ ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net