

ಕೊಪ್ಪಳ: ಗ್ರಾಹಕರ ಅಗತ್ಯತೆ ಅರಿತು ವ್ಯವಹರಿಸುವ ಮೂಲಕ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಪೈಪೋಟಿ ನಡುವೆಯೂ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಆಡೂರು ಹೇಳಿದರು.
ನಗರದ ಶಿವಶಾಂತವೀರ ಮಂಗಲಭವನದಲ್ಲಿ ಹಮ್ಮಿಕೊಂಡಿದ್ದ ಬ್ಯಾಂಕಿನ 91ನೇ ವಾರ್ಷಿಕ ಮಹಾಸಭೆಯಲ್ಲಿ ವರದಿ ವಾಚಿಸಿ ಮಾತನಾಡಿದರು.
ಗ್ರಾಹಕರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದುವುದು ಆದ್ಯ ಕರ್ತವ್ಯವೆಂದು ಅರಿತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸದಸ್ಯರು ಹಾಗೂ ಗ್ರಾಹಕರ ವಿಶ್ವಾಸ ಹೆಚ್ಚಿಸಿಕೊಂಡು ಉತ್ತಮ ಸೇವೆ ನೀಡಲು ವಿಶೇಫಿ ಗಮನ ನೀಡುತ್ತಿದ್ದೇವೆ. ಪ್ರಸಕ್ತ ಸಾಲಿಗೆ ಶೇ.13ರಫಿ್ಟು ಡಿವಿಡೆಂಡ್ ಪಾವತಿಸಲು ಕಾರ್ಯಕಾರಿ ಮಂಡಳಿ ಶಿಫಾರಸ್ಸು ಮಾಡಿದೆ. ಬ್ಯಾಂಕಿನ ಆರ್ಥಿಕ ಸಹಾಯ ಪಡೆದ ಅನೇಕ ಗ್ರಾಹಕರು ಆರ್ಥಿಕವಾಗಿ ಬಲಿಫ್ಠಿರಾಗಿದ್ದಾರೆಂದು ತಿಳಿಸಲು ಹರ್ಫಿವೆನಿಸುತ್ತದೆ. ನಮ್ಮ ಬ್ಯಾಂಕು "ಕೋರ್ಬ್ಯಾಂಕಿಗ್" ವ್ಯವಸ್ಥೆ ಹೊಂದಿದ್ದು, ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಲಾಗಿದೆ. ಐಡಿಬಿಐ ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಆರ್ಟಿಜಿಎಸ್, ಎನ್ಇಎ್ಟಿ ಬ್ಯಾಂಕಿಂಗ್ ಸೌಲಭ್ಯ ನೀಡಲಾಗಿದೆ. ಚೆಕ್, ಎಟಿಎಂ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಫಿ್ಟು ಸೌಲಭ್ಯ ಕಲ್ಪಿಸಲಾಗಿವುದೆಂದರು.
ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗ್ರಾಹಕರು ಅಭಿಪ್ರಾಯ ಹಂಚಿಕೊಂಡರು.
ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ವಿಶ್ವನಾಥ ಅಗಡಿ, ಬಸವರಾಜ್ ಶಹಪೂರು, ರಾಜೇಂದ್ರಕುಮಾರ ಶೆಟ್ಟರ್, ಶಿವಕುಮಾರ ಪಾವಲಿಶೆಟ್ಟರ್, ಶಿವರಡ್ಡಿ ಭೂಮಕ್ಕನವರ್, ಗವಿಸಿದ್ದಪ್ಪ ತಳಕಲ್, ರಮೇಶ ಕವಲೂರು, ನಾಗರಾಜ್ ಅರಕೇರಿ, ಸುಮಂಗಲಾ ಸೋಮಲಾಪೂರ, ಸೈಯದಾ ಶೈನಾಜಬೇಗಂ, ಜಯಶ್ರೀ ಬಬಲಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಷಿ, ಬ್ಯಾಂಕಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ದೆಕೊಪ್ಪ ಇತರರಿದ್ದರು.