ಅಂತಾರಾಜ್ಯ ವಧು-ವರ ಸಮಾವೇಶ ಸೆ.15ಕ್ಕೆ

Published on

ಕೊಪ್ಪಳ: ನಗರದ ಮಧುಶ್ರೀ ಗಾರ್ಡನ್​ನಲ್ಲಿ ಸೆ.15ರಂದು ಸಮಸ್ತ ಗಾಣಿಗ ಜಾತಿ, ಜನಾಂಗಗಳ ಎರಡನೇ ಅಂತಾರಾಜ್ಯ ವಧು-ವರರ ಸಮಾಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗಾಣಿಗ ಸಂಘದ ಗೌರವಾಧ್ಯಕ್ಷ ರುದ್ರಮುನಿ ಗಾಳಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ವಧ-ವರರನ್ನು ಹುಡುವುದು ಸವಾಲಿನ ಕೆಲಸವಾಗಿದೆ. ಅವರ ಕಫ್ಟಿ ಅರಿತು ವಧ-ವರರ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ, ಮಹಾರಾಫ್ಟ್ರಿದಿಂದ 161 ವಧು-ವರರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಆ.30 ಕೊನೆ ದಿನ. 300ಕ್ಕೂ ಹೆಚ್ಚು ವಧು-ವರರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದರು.

ಸರ್ಕಾರಿ ನೌಕರಿ ಇರುವವರಿಗೆ ತಮ್ಮ ಮಗಳನ್ನು ಕೊಡಬೇಕೆಂಬ ಹುಚ್ಚು ಹವ್ಯಾಸ ಪಾಲಕರು ಬಿಡಬೇಕು. ಹಣವಂತರು ಹಣ ತಿಂದು ಬದುಕುತ್ತಿಲ್ಲ. ಕೋಟ್ಯಧಿಶರೂ ರೈತರು ಬೆಳೆದ ಆಹಾರವನ್ನೇ ತಿನ್ನಬೇಕು. ಕೃಷಿಕರ ಬಗ್ಗೆ ತಾತ್ಸಾರ ತೋರದಂತೆ ಸಮಾವೇಶದಲ್ಲಿ ಜಾಗೃತಿ ಮೂಡಿಸಲಾಗುವುದು. ಶೈಕ್ಷಣಿಕ ಅರ್ಹತೆ, ಸದ್ಗುಣ, ಸನ್ನಡತೆ, ಕ್ರಿಯಾಶೀಲ ವರನಿಗೆ ಕನ್ಯೆ ನೀಡಲು ಸಮುದಾಯದವರು ಮುಂದಾಗಬೇಕೆಂದು ಮನವಿ ಮಾಡುತ್ತೇವೆ. ಲಿಂಗಾಯತ ಒಳ ಪಂಗಡದವರು ಪರಸ್ಪರ ವಧು-ವರರಾಗ ಬಯಸಿದಲ್ಲಿ ನಾವು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದರು.

ವಧು-ವರರ ವೇದಿಕೆಯ ಡಾ.ಕೇಶವ ಕಾಬಾ, ಉಮಾಪತಿ ಚೌದ್ರಿ, ಗಾಣಿಗ ಸಂಘದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಮುಖಂಡ ಮಹೇಶ ಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net