ಲೋಕಾಯುಕ್ತ ಬಲೆಗೆ ಬಿದ್ದ ಗಂಗಾವತಿ ತಹಸೀಲ್ದಾರ್

Koppal gangavayhi tahasildar trap lokayukta corruption arrest
koppal-gangavathi-tahasildar-trap-lokayukta-corruption-arrest
MANJUNATH BHOGAVATHI
Published on

ಗಂಗಾವತಿ(ಕೊಪ್ಪಳ): ಅಕ್ರಮವಾಗಿ ಮರಂ ಸಾಗಣೆಗೆ ಅವಕಾಶ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಗಂಗಾವತಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಅಕ್ರಮವಾಗಿ ಮರಂ ಸಾಗಣೆಗೆ ವಿಷಯವಾಗಿ ರಸೂಲ್ ಎಂಬಾತನಿಗೆ ಒಂದು ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ತಹಸೀಲ್ದಾರ್ ಕಚೇರಿ ಪರಿಚಾರಕ ರಾಜು ಎಂಬಾತನ ಮೂಲಕ ಮೊದಲ ಕಂತಿನಲ್ಲಿ 50 ಸಾವಿರ ರೂ. ನೀಡುವಂತೆ ಡೀಲ್ ಕುದರಿಸಿದ್ದಾರೆ.

ಅದರಂತೆ ಶನಿವಾರ ತಡರಾತ್ರಿ ಲಂಚದ ಹಣ ಪಡೆವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ತಹಸೀಲ್ದಾರ್ ಮಂಜುನಾಥ ಹಾಗೂ ಪರಿಚಾರಕ ರಾಜುನನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಸಲೀಂ ಪಾಷಾ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಧ್ಯರಾತ್ರಿ ಒಂದು ಗಂಟೆಗೆ ಪಂಚನಾಮೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.‌

ತಹಸೀಲ್ದಾರ್ ಮಂಜುನಾಥ ಕೆಲ ದಿನಗಳಲ್ಲಿ ಉಪ ವಿಭಾಗಾಧಿಕಾರಿಯಾಗಿ ಬಡ್ತಿ ಹೊಂದಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net