ಯುವಕನಿಗೆ ಚಾಕು ಇರಿತ ಪ್ರಕರಣ, ಮೂವರ ಬಂಧನ

IMG-20240924-WA0018
Published on

ಗಂಗಾವತಿ (ಕೊಪ್ಪಳ): ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಉಂಟಾದ ಗಲಾಟೆಯಲ್ಲಿ ಯುವಕನೋರ್ವನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ‌ ದಾಖಲಾಗಿದ್ದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಹಳೇ ವೈಷಮ್ಯ ಇಟ್ಟುಕೊಂಡು ಯುವಕರ ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ. ಮಾತಿನ ಚಕಮಕಿ ಮೂಲಕ ಆರಂಭವಾದ ಜಗಳ ತಾರಕಕ್ಕೇರಿದೆ. ಕೈ ಕೈ ಮಿಲಾಯಿಸಿದ ಯುವಜರು ಬಡಿದಾಡಿಕೊಂಡಿದ್ದಾರೆ.

ಶಿವಕುಮಾರ್ ಎಂಬಾತನಿಗೆ ಚಾಕು ಇರಿದಿದ್ದು ಹುಬ್ಬಳ್ಳಿಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಕಾರ್ಯಪ್ರವೃತ್ತರಾದ ಪೊಲೀಸರು ಗಂಗಾವತಿ ನಗರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವೈಯಕ್ತಿಕ ಕಾರಣಕ್ಕೆ ಜಗಳ ನಡೆದಿದೆ‌. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಆರೋಪಿಗಳ ಬಂಧನವಾಗಿದ್ದು ತನಿಖೆ ಮುಂದುವರೆಸಿರುವುದಾಗಿ ಎಸ್ಪಿ ಡಾ.ರಾಮ್. ಎಲ್. ಅರಸಿದ್ದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net