ಗಂಗಾವತಿಯಲ್ಲಿ ಗಣೇಶ ವಿರ್ಜನೆ ವೇಳೆ ಯುವಕನಿಗೆ ಚಾಕು ಇರಿತ !

IMG_20240924_083710
Published on

ಗಂಗಾವತಿ (ಕೊಪ್ಪಳ) : ರಾಜ್ಯದ ವಿವಿಧೆಡೆ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಗಳ ಕರಿ ನೆರಳು ಮಾಸುವ ಮುನ್ನವೇ ಗಂಗಾವತಿ ನಗರದಲ್ಲಿ ಯುವಕರ ಗುಂಪಿನ ನಡುವೆ ಗಲಾಟೆ ನಡೆದಿದೆ. ಯುವಕನೋರ್ವನಿಗೆ ಚಾಕು ಇರಿದಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಲಾಗಿದೆ.

ಸೋಮವಾರ 17 ನೇ ದಿನದ ಗಣಪತಿ ವಿಸರ್ಜನೆ ವೇಳೆ ತಡರಾತ್ರಿ ಘಟನೆ ನಡೆದಿದೆ. ವಿನಾ ಕಾರಣ ಗಲಾಟೆ ಮಾಡಿಕೊಂಡ ಯುವಕರು ಪರಸ್ಪರ ಬಡಿದಾಡಿದ್ದಾರೆ. ಈ ವೇಳೆ ಶಿವು ಎಂಬಾತನಿಗೆ ಚಾಕು ಇರಿಯಲಾಗಿದೆ. ಇನ್ನು ಮೂವರಿಗೆ ಗಾಯಗಳಾಗಿವೆ.

ಮೆರವಣಿಗೆ ಗಂಗಾವತಿ ನಗರದ ಯಶೋಧ ಆಸ್ಪತ್ರೆ ಹತ್ತಿರ ಬರುತ್ತಿದ್ದಂತೆ ಗಲಾಟೆ ಆರಂಭವಾಗಿದೆ. ಡಾನ್ಸ್ ವಿಚಾರವಾಗಿ ಶುರುವಾರದ ಗಲಾಟೆ ವಿಕೋಪಕ್ಕೆ ತಿರುಗಿದೆ. ಒಂದೇ ದಿನ 17 ಗಣಪತಿ ಮೂರ್ತಿ ವಿಸರ್ಜನೆ ನಡೆದ ಕಾರಣ‌ ಸಾಕಷ್ಟು ಜನ ಜಮಾಯಿಸಿದ್ದರು. ಗುಂಡಮ್ಮ ಕ್ಯಾಂಪ್ ಗಜಾನನ ಯುವಕ ಸಂಘದ ಗಣಪತಿ ಮೂರ್ತಿ ಮುಂದೆ ಡಿಜೆ ಹಾಡಿಗೆ ಕುಣಿಯುತ್ತಿದ್ದ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.

38 ವರ್ಷದ ಶಿವು ಎಂಬಾತ ಚಾಕು ಇರಿತಕ್ಕೆ ಒಳಗಾಗಿದ್ದಾನೆ. ಗಣೇಶ, ಮಂಜು, ಸಾಗರ ಎಂಬುವವರಿಗೆ ಹಲ್ಲೆಯಾಗಿದೆ. ಶಿವು ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳಿಸಲಾಗಿದೆ. ಗಣೇಶ, ಮಂಜು ಮತ್ತು ಸಾಗರ ಎಂಬ ಯುವಕರಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net