ಮಳೆಗೆ ಕುಸಿದ ಮನೆ, ಢಣಾಪುರದಲ್ಲಿ ಮಣ್ಣಿನಡಿ‌‌ ಸಿಲುಕಿದ‌ ವ್ಯಕ್ತಿ

IMG-20241005-WA0000
Published on

ಕೊಪ್ಪಳ : ಜಿಲ್ಲಾದ್ಯಂತ ವರುಣನ ಆರ್ಭಟ ಮುಂದುವರೆದಿದೆ. ಗಂಗಾವತಿ ತಾಲೂಕಿನ ಢಣಾಪುರದಲ್ಲಿ‌ ಮಣ್ಣಿನ ಮನೆ ಕುಸಿದು ವ್ಯಕ್ತಿಯೋರ್ವ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.

ಶುಕ್ರವಾರ ತಡರಾತ್ರಿಯಿಂದ ಮಳೆ‌ ಸುರಿಯುತ್ತಿದೆ. ಜಟಿ ಮಳೆ ಮುಂದುವರೆದಿದೆ. ಮಣ್ಣಿನ ಮನೆ ಉಳ್ಳವರಲ್ಲಿ ಆತಂಕ ಹೆಚ್ಚಿಸಿದೆ. ಗಂಗಾವತಿ ತಾಲೂಕಿನ ಢಣಾಪುರ, ಶ್ರೀರಾಮನಗರ ಸೇರಿ ಇತರೆಡೆ ಮನೆಗಳು‌ ಕುಸಿದು ಬಿದ್ದಿದ್ದು ಮಳೆರಾಯ ಆವಾಂತರ ಸೃಷ್ಟಿಸಿದ್ದಾನೆ.‌

ಢಣಾಪುರ ಗ್ರಾನದಲ್ಲಿ ಮನೆಯೊಂದು ಕುಸಿದಿ ಬಿದ್ದಿದ್ದು, ವ್ಯಕ್ತಿಯೊಬ್ಬ ಮಣ್ಣಿನಲ್ಲಿ ಸಿಲುಕಿದ್ದಾನೆ. ತಕ್ಷಣ ಕಾರ್ಯಾಚರಣೆಗೆ ಮುಂದಾದ ಗ್ರಾಮಸ್ಥರು ತೆರವು ಕಾರ್ಯಾಚರಣೆ ನಡೆಸಿದರು. ಮಣ್ಣಿನಡಿ‌ ಸಿಲುಕಿದಾತನನ್ನು ಪ್ರಕಾಶ ಎನ್ನಲಾಗಿದೆ. ಗಂಗಾವತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net