ಕುಸಿದು ಬಿದ್ದ ಅಂಗನವಾಡಿ ಛಾವಣಿ, ನಾಲ್ವರು ಮಕ್ಕಳಿಗೆ ಗಂಭೀರ ಗಾಯ !

IMG-20240923-WA0010
Published on

ಗಂಗಾವತಿ (ಕೊಪ್ಪಳ): ನಗರದ ಮೆಹಬೂಬ್ ನಗರದ 7ನೇ ಅಂಗನವಾಡಿಯಲ್ಲಿ ಛಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಂಭೀರ ಗಾಯವಾಗಿದೆ.

ಎಂದಿನಂತೆ ಮಕ್ಕಳು ಅಂಗನವಾಡಿಗೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ಛಾವಣಿ ಕುಸಿದು ಬಿದ್ದಿದೆ. ಕೆಳಗೆ ಕುಳಿತಿದ್ದ ಮರ್ದಾನ, ಆಮನ್, ಮನ್ವಿತ್ ಹಾಗೂ ಸುರಕ್ಷಾ ಎಂಬ ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಮಕ್ಕಳನ್ನು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿದು ಸಿಡಿಪಿಒ ಜಯಶ್ರೀ ಹಾಗೂ ನಗರಸಭೆ ಅಧ್ಯಕ್ಷ ಮೌಲಾಸಾಬ್ ಭೇಟಿ ನೀಡಿ ಪರಿಶೀಲಿಸಿದರು. 2016ರಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಗಿದೆ. ಎಂಟೇ ವರ್ಷದಲ್ಲಿ ಕುಸಿದು ಬಿದ್ದಿದ್ದು ಕಳಪೆ ಕಾಮಗಾರಿ ನಡೆಸಿದ್ದೇ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net