ಗಾಂಧಿ ಜಯಂತಿ ಅಂಗವಾಗಿ ಪಾದಯಾತ್ರೆ

Published on

ಕೊಪ್ಪಳ: ಗಾಂಧಿ ಜಯಂತಿಯಂದು ಶಿಕ್ಷಕರ ಕಲಾ ಸಂ, ಗಾಂಧಿ ಕಲಾ ಬಳಗ ಹಾಗೂ ಇತರ ಸಂ&ಸಂಸ್ಥೆಗಳ ಸಹಯೋಗದಲ್ಲಿ ಅ.2ರಂದು ಕೊಪ್ಪಳದ ಅಶೋಕ ವೃತ್ತದಿಂದ ಕಾಮನೂರು ಗ್ರಾಮಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದೆಂದು ಗಾಂಧಿ ವಿಚಾರ ವೇದಿಕೆ ಕಾರ್ಯದರ್ಶಿ ಬಸವರಾಜ ಸವಡಿ ತಿಳಿಸಿದರು.

ಕಳೆದ ವರ್ಷ ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಭಾನಾಪುರ ಗ್ರಾಮಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಈ ವರ್ಷ ದುಶ್ಚಟ ಮುಕ್ತ ಗ್ರಾಮದವಾದ ಕಾಮನೂರಿಗೆ ತೆರಳಲಿದ್ದೇವೆ. ಗ್ರಾಮದಲ್ಲಿ ಮದ್ಯ, ಸಿಗರೇಟರ್​, ತಂಬಾಕು, ಗುಟ್ಖಾ ಮಾರಾಟ ನಿಷೇಧವಿದೆ. ಹಲವು ಪ್ರಗತಿಪರ ಕೃಷಿಕರಿದ್ದಾರೆ. ಜಲಸಂರಕ್ಷಣೆಗೆ ಹೆಸರಾಗಿದೆ. ಜನ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಪಾದಯಾತ್ರೆ ಬಳಿಕ ಗ್ರಾಮಸ್ಥರೊಂದಿಗೆ ಗಾಂಧಿ ಮತ್ತು ಸುಸ್ಥಿರ ಬದುಕು ವಿಷಯವಾಗ ಸಂವಾದ ನಡೆಸುವ ಮೂಲಕ ಗಾಂಧಿ ಜಯಂತಿ ಆಚರಿಸಲಾಗುವುದು. ಪ್ರಗತಿಪರ ಕೃಷಿಕರು, ದುಶ್ಚಟ ಮುಕ್ತ ಗ್ರಾಮವಾಗಿಸಲು ಶ್ರಮಿಸಿದ ಹಿರಿಯರನ್ನು ಗೌರವಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಜೆ ಕೊಪ್ಪಳದ ನೌಕರರ ಭವನದಲ್ಲಿ ಗಾಂಧೀ ಬೆಳಕು ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಇರಲಿದೆ. ಜನಪ್ರತಿನಿಧಿಗಳು, ವಿವಿಧ ಗಣ್ಯರು ಭಾಗಿಯಾಗುವರು. ಜನರು ಯಾತ್ರೆಯಲ್ಲಿ ಭಾಗಿಯಾಗಬಹುದು. ಆಸಕ್ತರು 9481938304, 9448570340, 9538801707, 9535488185, 9980910533, ಪ್ರಾಣೇಶ 9880759712, 9902893671, 9901135874 ಸಂಖ್ಯೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದರು. ಬಳಗದ ರಾಮಣ್ಣ ಶ್ಯಾವಿ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್​, ಶಿವಪ್ಪ ಜೋಗಿ, ಪ್ರಾಣೇಶ ಪೂಜಾರ, ನಾಗರಾಜ ನಾಯಕ ಡೊಳ್ಳಿನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net