ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ

251220 Koppal Atal bihari vajapeye
ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಗ್ರಾಮೀಣ ಮಂಡಲದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕಿಸಾನ್ ಸಮ್ಮಾನ್ ದಿನ ಆಚರಿಸಲಾಯಿತು.
Published on

ಕೊಪ್ಪಳ: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯು ರೈತರಿಗೆ ವರವಾಗಿ ಪರಿಣಮಿಸಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ್ ಹಿಟ್ನಾಳ್ ಹೇಳಿದರು.

ತಾಲೂಕಿನ ಹುಲಿಗಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಹಾಗೂ ಕಿಸಾನ್ ಸಮ್ಮಾನ್ ದಿನಾಚರಣೆಯಲ್ಲಿ ಮಾತನಾಡಿದರು. ಕಿಸಾನ್ ಸಮ್ಮಾನ್‌ನಿಂದ ದೇಶದ 9 ಕೋಟಿ ರೈತರಿಗೆ ಅನುಕೂಲವಾಗಿದೆ. ಪ್ರಧಾನಿ ಮೋದಿಯ ಜನಪರ ಯೋಜನೆಗಳಲ್ಲಿ ಇದು ಒಂದಾಗಿದೆ. ಬೀಜ, ಗೊಬ್ಬರ ಸೇರಿ ಇತರ ಕೃಷಿ ಚಟುವಟಿಕೆ ಕೈಗೊಳ್ಳಲು ಈ ಹಣ ಸಹಾಯವಾಗಿದೆ. ಅಲ್ಲದೆ, ಇಂದು ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮ ದಿನವಿದ್ದು, ಅಂಥ ಮಹಾನ್ ನಾಯಕರನ್ನು ಪಡೆದ ನಾವೆಲ್ಲ ಪುಣ್ಯವಂತರು. ಅವರ ಸೇವೆ ಇನ್ನಷ್ಟು ಕಾಲ ದೇಶಕ್ಕೆ ಬೇಕಿತ್ತು. ಆದರೆ, ಬಹು ಬೇಗನೆ ನಮ್ಮನ್ನು ಅಗಲಿದ್ದಾರೆ. ಆದರೆ, ನಮ್ಮೆಲ್ಲರಲ್ಲಿ ಎಂದೆಂದಗೂ ಅಮರವಾಗಿರಲಿದ್ದಾರೆ ಎಂದರು. ಅಟಲ್ ಜೀ ಭಾವಚಿತ್ರಕ್ಕೆ ಪುಷ್ಟ ಅರ್ಪಿಸುವ ಮೂಲಕ ಜನ್ಮ ದಿನ ಆಚರಿಸಲಾಯಿತು.

ರೈತ ಮೋರ್ಚಾ ಅಧ್ಯಕ್ಷ ಮಹೇಶ ಮಂಗಳೂರು, ತಾಪಂ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಮುಖಂಡರಾದ ಬಸವರಾಜ ಕರ್ಕಿಹಳ್ಳಿ, ಜಂಬಣ್ಣ ಹೂಗಾರ, ಶೇಖರಪ್ಪ ಸಿಂದೋಗಿ, ಬಸವರಾಜ ಮೇಟಿ, ಪರಶುರಾಮ ವಾಲ್ಮೀಕಿ, ಬಸವರಾಜ ಗದ್ದಿಕೇರಿ, ರಾಘವೇಂದ್ರ ರೆಡ್ಡಿ, ತಾಲೂಕ ಪ್ರಧಾನ ಕಾರ್ಯದರ್ಶಿ ಪಿ.ಬಿ.ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net